ವಂದಲಿ ಶ್ರೀಬಲಭೀಮನ  ಉತ್ಸವ ಆಚರಣೆ

ಬುಧವಾರ, ಏಪ್ರಿಲ್ 24, 2019
29 °C

ವಂದಲಿ ಶ್ರೀಬಲಭೀಮನ  ಉತ್ಸವ ಆಚರಣೆ

Published:
Updated:
Prajavani

ಹಟ್ಟಿಚಿನ್ನದಗಣಿ:  ಹತ್ತಿರದ  ವಂದಲಿ ಸುಕ್ಷೇತ್ರದಲ್ಲಿ ಯುಗಾದಿ ಪಾಡ್ಯದ ನಿಮಿತ್ತ ಬಲಭೀಮನ ಉತ್ಸವ ಶನಿವಾರ  ವಿಜೃಭಣೆಯಿಂದ ಜರುಗಿತು.

ಯುಗಾದಿ ನಿಮಿತ್ತ ಬಲಬೀಮನ ಮೂರ್ತಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಮಧ್ಯಾಹ್ನ ಅರ್ಚಕರ ಮನೆಯಿಂದ ಉತ್ಸವ ಮೂರ್ತಿ ಮೆರವಣಿಗೆ, ಹಮ್ಮಿಕೊಳ್ಳಲಾಗಿತ್ತು.  ಸಂಜೆ ಪಂಚಾಂಗ ಪಠಣ-ಶ್ರವಣ, ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು. ಆನಂತರ ಉತ್ಸವ ಜರುಗಿತು.

ದೇವಸ್ಥಾನ ಸಮಿತಿ, ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಭಕ್ತರು ಉತ್ಸವದಲ್ಲಿ ಭಾಗವಹಿಸಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !