ಜನರು ಹಬ್ಬದ ಪ್ರಯುಕ್ತ ಅಗತ್ಯ ವಸ್ತುಗಳನ್ನು ಖರೀದಿಸಿದರು. ಹೂವು ಹಣ್ಣು, ತರಕಾರಿ, ಪೂಜಾ ಸಾಮಗ್ರಿಗಳು ಹಾಗೂ ಅಲಂಕಾರಕ್ಕೆ ಅಗತ್ಯವಾದ ವಸ್ತುಗಳನ್ನು ವ್ಯಾಪಾರಿಗಳೊಂದಿಗೆ ಚೌಕಾಸಿ ನಡೆಸಿ ಖರೀದಿ ಮಾಡಿದರು. ತೀನ್‌ಖಂದಿಲ್, ಉಸ್ಮಾನಿಯಾ ಮಾರುಕಟ್ಟೆ, ಮಹಾವೀರ ವೃತ್ತದ ಬಳಿಯ ಮಾರುಕಟ್ಟೆಗಳಲ್ಲೂ ವ್ಯಾಪಾರ ಜೋರಾಗಿ ನಡೆಯಿತು.