ಅಧಿಕಾರಿಗಳ ಜತೆ ಮಹಿಳೆಯರ ವಾಗ್ವಾದ

7
ಕವಿತಾಳ: ವಿವಿಧ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ

ಅಧಿಕಾರಿಗಳ ಜತೆ ಮಹಿಳೆಯರ ವಾಗ್ವಾದ

Published:
Updated:
ಕವಿತಾಳದಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಆಗ್ರಹಿಸಿ 5ನೇ ವಾರ್ಡ್‌ ನಿವಾಸಿಗಳು ಅಧಿಕಾರಿಗಳೊಂದಿಗೆ ಮಂಗಳವಾರ ವಾಗ್ವಾದ ನಡೆಸಿದರು

ಕವಿತಾಳ: ಪಟ್ಟಣದ 5ನೇ ವಾರ್ಡ್‌ನಲ್ಲಿ ಕಳೆದ ಒಂದು ತಿಂಗಳಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಆರೋಪಿಸಿ ಪುರಸಭೆ ವಿರುದ್ಧ ವಾರ್ಡ್‌ ನಿವಾಸಿಗಳು ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದರು.

ಸಾಮಾನ್ಯ ಸಭೆ ನಿಮಿತ್ತ ಅಧಿಕಾರಿಗಳು ಮತ್ತು ಸದಸ್ಯರು ಸಭೆ ಸೇರಿದ್ದ ಸಮಯದಲ್ಲಿ ಇಲ್ಲಿನ ಸಿಆರ್‌ಸಿ ಕಟ್ಟಡಕ್ಕೆ ಬಂದ ಮಹಿಳೆಯರು ಮತ್ತು ವಾರ್ಡ್‌ ನಿವಾಸಿ ಮೆಹಬೂಬ್ ಪಾಶಾ ಅವರು ನೀರಿನ ಸಮಸ್ಯೆ ಕುರಿತು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. 4.5 ಮತ್ತು 12ನೇ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಆಗ್ರಹಿಸಲಾಯಿತು.  ಕೊಳವೆಭಾವಿ ದುರಸ್ತಿ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಜೆ.ಟಿ.ರೆಡ್ಡಿ ಭರವಸೆ ನೀಡಿದರು.

ರಾಜಾಸಾಬ್, ಖಾಜಾಹುಸೇನ್, ಹುಸೇನ್ ಬೀ, ಖುರೇಷಿ, ರಷೀದಾ ಬೇಗಂ, ಮಾಬಮ್ಮ, ಬಡಿಮಾ, ಹಿಮಾಮ್ ಬೀ, ಮೆಹಮೂದಾ, ರಸುಲ್ಲಾ, ಮಕ್ತುಂಸಾಬ್ ಮತ್ತು ರುಕ್ಮುದ್ದೀನ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !