4
ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿದರೂ ಅಭಿವೃದ್ಧಿ ಶೂನ್ಯ

ನೀಗದ ನೀರಿನ ಸಮಸ್ಯೆ ಸ್ವಚ್ಛತೆ ಮರೀಚಿಕೆ

Published:
Updated:
ಕವಿತಾಳದ ಆನ್ವರಿ ಮುಖ್ಯ ರಸ್ತೆಯಲ್ಲಿ ಚರಂಡಿ ನೀರು ನಿಂತು ಗಲೀಜು ಸೃಷ್ಟಿಯಾಗಿರುವುದು.

ಕವಿತಾಳ:  ಬಹುತೇಕ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ, ಚರಂಡಿ ಮತ್ತು ರಸ್ತೆಗಳ ಅವ್ಯವಸ್ಥೆ, ಸ್ವಚ್ಛತೆ ಮಾಯ. ಇದು ಕವಿತಾಳ ಸ್ಥಿತಿ.

ಸಮೀಪದ ಗಂಗಾನಗರ ಕ್ಯಾಂಪ್ (74) ಮತ್ತು ಲಕ್ಷ್ಮಿ ನಾರಾಯಣ ಕ್ಯಾಂಪ್ (73) ಸೇರಿದಂತೆ 16 ವಾರ್ಡ್‌ಗಳಲ್ಲಿ ಒಳಗೊಂಡು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿದ ನಂತರ ಅಭಿವೃದ್ಧಿ ಕನಸು ಕಂಡಿದ್ದ ನಾಗರಿಕರಿಗೆ ಭ್ರಮ ನಿರಸನವಾಗಿದೆ ಎಂದು ಇಮ್ತಿಯಾಜ್ ವಕೀಲ ಆರೋಪಿಸಿದ್ದಾರೆ.

ಇಲ್ಲಿನ ಆನ್ವರಿ ಮುಖ್ಯ ರಸ್ತೆಯಿಂದ 8 ಮತ್ತು 9ನೇ ವಾರ್ಡ್‌ ಸಂಪರ್ಕಿಸುವ ರಸ್ತೆಯಲ್ಲಿ ಚರಂಡಿ ನೀರು ನಿಂತು ಹಂದಿಗಳ ತಾಣವಾಗಿದೆ ಇಲ್ಲಿನ ನಿವಾಸಿಗಳು ಮೂಗು ಮುಚ್ಚಿಕೊಂಡು ತಿರುಗಾಡಬೇಕಾದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ಅಲ್ಲಿನ ನಿವಾಸಿಗಳ ಆರೋಪ.

ಚರಂಡಿಯಿಂದ ತೆಗೆದ ತ್ಯಾಜ್ಯವನ್ನು ಚರಂಡಿ ಪಕ್ಕದಲ್ಲಿ ಹಾಕಲಾಗುತ್ತಿದೆ ಮುಖ್ಯ ರಸ್ತೆ ಸೇರಿದಂತೆ ಹಲವೆಡೆ ಕಸದ ರಾಶಿಗಳು ಮತ್ತು ಪ್ಲಾಸ್ಟಿಕ್ ಹಾವಳಿ ಮಿತಿ ಮೀರಿದೆ. ಕಸದ ತೊಟ್ಟಿಗಳ ಕೂಡಿಸುವುದು ಮತ್ತು ಕಸ ವಿಲೇವಾರಿ ಬಗ್ಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಕಸ ವಿಲೇವಾರಿಗೆ ಅಗತ್ಯವಿರುವ ವಾಹನಗಳ ಖರೀದಿಗೆ 14ನೇ ಹಣಕಾಸು ಯೋಜನೆಯಡಿ ಅನುದಾನ ಬಳಸಿಕೊಳ್ಳಲು ಪಟ್ಟಣ ಪಂಚಾಯಿತಿ ಕಳುಹಿಸಿದ ಅನುಮೋದನೆಗೆ ಜಿಲ್ಲಾಡಳಿತ ವರ್ಷ ಕಳೆದರೂ ಮಂಜೂರಾತಿ ನೀಡಿಲ್ಲ ಎನ್ನುವುದು ಅಧಿಕಾರಿಗಳ ಅನಿಸಿಕೆ.

ಹೆದ್ದಾರಿ ಪಕ್ಕದಲ್ಲಿ ಕೋಳಿ ಮಾಂಸದ ತ್ಯಾಜ್ಯ ಹಾಕುವುದರಿಂದ ವಾಯು ವಿಹಾರಕ್ಕೆ ಹೋಗುವ ನಾಗರಿಕರು ಅಸಹ್ಯ ಪಡುವಂತಾಗಿದೆ. ವಿವಿಧ ರಸ್ತೆಗಳು ಮತ್ತು ಚರಂಡಿ ವ್ಯವಸ್ಥೆ ಸುಧಾರಣೆಗೆ ನಗರೋತ್ಥಾನ ಯೋಜನೆಯಡಿ ಟೆಂಡರ್ ಮೂಲಕ ನೀಡಿದ ಕಾಮಗಾರಿ 6 ತಿಂಗಳು ಕಳೆದರೂ ಆರಂಭವಾಗಿಲ್ಲ ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ನೀಡಬೇಕು ಎಂದು ಭಾರತ ವಿದ್ಯಾರ್ಥಿ ಪರಿಷತ್ ಸಂಘಟನೆ ಜಿಲ್ಲಾ ಘಟಕದ ಸಹ ಕಾರ್ಯದರ್ಶಿ ಲಿಂಗರಾಜ ಕಂದಗಲ್ ಒತ್ತಾಯಿಸಿದ್ದಾರೆ.‌

ರಸ್ತೆ ಬದಿ ಮನೆಗಳ ಮಾಲೀಕರಿಗೆ ನೊಟೀಸ್ ನೀಡಿ ತೆರವುಗೊಳಿಸಿಸಲಾಗುವುದು. ರಸ್ತೆ ಕಾಮಗಾರಿಗಳು ಶೀಘ್ರ ಆರಂಭವಾಗಲಿವೆ ಗುತ್ತಿಗೆ ಆಧಾರದಲ್ಲಿ ಕಾಮರ್ಿಕರ ನೇಮಕಕ್ಕೆ ಅನುಮತಿ ಸಿಕ್ಕಲ್ಲಿ ಸ್ವಚ್ಛತೆ ಕೈಗೊಳ್ಳಲು ಅನುಕೂಲವಾಗುತ್ತದೆ.
– ಜೆ.ಟಿ.ರೆಡ್ಡಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !