ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಟ್ಟಿಚಿನ್ನದಗಣಿ | ನೀರಿಗೆ ತಪ್ಪದ ಬವಣೆ

ಆನ್ವರಿ ಗ್ರಾಮದಲ್ಲಿ 10 ದಿನಕ್ಕೊಮ್ಮೆ ಸರಬರಾಜು: ಗ್ರಾಮಸ್ಥರ ಆಕ್ರೋಶ
Last Updated 19 ಮೇ 2020, 20:00 IST
ಅಕ್ಷರ ಗಾತ್ರ

ಹಟ್ಟಿಚಿನ್ನದಗಣಿ: ಆನ್ವರಿ ಗ್ರಾಮದಲ್ಲಿ ಶುದ್ಧ ಕುಡಿವ ನೀರಿನ ಸಮಸ್ಯೆ ಉಂಟಾಗಿದೆ. ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಆನ್ವರಿ ಅವರ ಸ್ವಗ್ರಾಮವಾದ ಆನ್ವರಿ ಗ್ರಾಮದಲ್ಲಿ 5ರಿಂದ 7 ಸಾವಿರ ಜನಸಂಖ್ಯೆ ಇದೆ. ಗ್ರಾಮಕ್ಕೆ ಕಾಳೇಶ್ವರ ಕೆರೆಯಿಂದ ನೀರು ಸರಬರಾಜು ಮಾಡುವ ಯೋಜನೆ ಜಾರಿಯಲ್ಲಿದ್ದು 10 ದಿನಕ್ಕೆಮ್ಮೊ ಮಾತ್ರ ನೀರು ಬರುತ್ತದೆ.

ಗ್ರಾಮದ ಬಸ್‌ ನಿಲ್ದಾಣದ ಬಳಿಯ ಮಸೀದಿ ಹತ್ತಿರ ಬತ್ತಿದ ಬಾವಿಗೆ ಬೇರೆಕಡೆಯಿಂದ ನೀರು ತುಂಬಿಸಲಾಗುತ್ತಿದೆ. ಆದರೆ, ಈ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ಜನರ ಆರೋಪ.

ಗ್ರಾಮದ ಕೆಲವರು ಶುದ್ಧ ಕುಡಿಯುವ ನೀರಿಗಾಗಿ ಪಕ್ಕದ ಗ್ರಾಮಗಳಿಗೆ ತೆರಳುವಂತಾಗಿದೆ. ಪ್ರತಿ ದಿನ 12, ಕಿ,ಮೀ ದೂರದ ಹಟ್ಟಿ ಪಟ್ಟಣಕ್ಕೆ ಇಲ್ಲವೆ, ಗೆಜ್ಜಲಗಟ್ಟಾ, ವೀರಾಪುರ ಗ್ರಾಮಗಳ ಶಾಸಗಿ ಶುದ್ದ ಕುಡಿವ ನೀರಿನ ಘಟಕಗಳಿಂದ ಕುಡಿವ ನೀರು ತರುತ್ತಿದ್ದಾರೆ. ಪ್ರತಿದಿನ ಮಹಿಳೆಯರು ಮಕ್ಕಳು ಪಕ್ಕದ ಗ್ರಾಮಗಳ ಘಟಕದಿಂದ ಕುಡಿವ ನೀರಿನ ಕೊಡಗಳನ್ನು ತಳ್ಳುಬಂಡಿ ಮೂಲಕ ಅಥವಾ ಹೊತ್ತುಕೊಂಡು ನಡೆದು ಬರುವ ಅನಿವಾರ್ಯ ಪರಿಸ್ದಿತಿ ಇದೆ.

ಕುಡಿಯುವ ನೀರಿಗಾಗಿ ಗ್ರಾಮಸ್ಧರು ಜಮೀನಿನಲ್ಲಿರುವ ಕೊಳವೆ ಬಾವಿ ಅವಲಂಬಿಸುವಂತಾಗಿದೆ. ಅಸಮಪರ್ಕ ವಿದ್ಯುತ್ ಪೂರೈಕೆಯಿಂದ ಗ್ರಾಮದಲ್ಲಿ ನೀರು ಸರಬರಾಜಿನಲ್ಲಿ ಸಮಸ್ಯೆಯಾಗುತ್ತಿದೆ ಎಂದು ಯಂಕಪ್ಪ, ಆದಪ್ಪ, ಎಂಬುವವರು ಆರೋಪಿಸಿದ್ದಾರೆ.

ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಧೆ ಕಲ್ಪಿಸುವ ಸಲುವಾಗಿ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸುತ್ತಿಲ್ಲ ಎಂದು ಗ್ರಾಮಸ್ಧರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗ್ರಾಮಕ್ಕೆ ಶುದ್ದ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.

*
ಆನ್ವರಿ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಪೂರೈಕೆಗೆ ಅಧಿಕಾರಿಗಳು ತುರ್ತ ಕ್ರಮ ಕೈಗೊಳ್ಳಬೇಕು
-ಪ್ರಶಾಂತ ಆನ್ವರಿ ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT