ಗುರುವಾರ , ನವೆಂಬರ್ 26, 2020
20 °C

ರಾಯಚೂರು: ಎಲ್ಲಿ ಹೋಯಿತು 8 ಲಕ್ಷ ಕ್ಯುಸೆಕ್ ನೀರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಭೀಮಾ‌ ನದಿಯಲ್ಲಿ ಹರಿದುಬರುವ 8 ಲಕ್ಷ ಕ್ಯುಸೆಕ್ ಪ್ರವಾಹ ಹಾನಿ ನಿಯಂತ್ರಿಸಲು ರಾಯಚೂರು ಜಿಲ್ಲಾಡಳಿತವು ಪೂರ್ವ ತಯಾರಿ ಮಾಡಿಕೊಂಡು ಮೂರು ದಿನಗಳಾದರೂ ಕಲಬುರ್ಗಿಯಿಂದ ಇನ್ನೂ ನೀರು ತಲುಪಿಲ್ಲ!

ಕೃಷ್ಣಾನದಿಯೊಂದಿಗೆ ಭೀಮಾನದಿ ಸಂಗಮವಾಗುವ ರಾಯಚೂರಿನ ಗುರ್ಜಾಪುರದಲ್ಲಿ ಎರಡು ದಿನಗಳಿಂದ ನೀರು ಇಳಿಮುಖವಾಗುತ್ತಿದೆ. ಸೊನ್ನ ಬ್ಯಾರೇಜ್ ನಿಂದ 8 ಲಕ್ಷ ಕ್ಯುಸೆಕ್ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಡಳಿತದಿಂದ ಕೃಷ್ಣಾ ನದಿತೀರದ ಜನರಿಗೆ ಶನಿವಾರವೇ ಮುನ್ನಚ್ಚರಿಕೆ ನೀಡಲಾಗಿತ್ತು. ಪ್ರವಾಹ ನಿರ್ವಹಣೆಗಾಗಿ ಮಿಲಿಟರಿ ತಂಡವು ಬಂದಿದೆ. ನಿರೀಕ್ಷಿಸಿದಂತೆ ಕೃಷ್ಣಾನದಿ ಪ್ರವಾಹ ಏರಿಕೆ ಆಗುತ್ತಿಲ್ಲ. ಬದಲಾಗಿ ಇಳಿಮುಖವಾಗಿದ್ದು, ಗುರ್ಜಾಪುರ ಬ್ಯಾರೇಜ್ ತೆರೆದುಕೊಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು