ಗುರುವಾರ , ನವೆಂಬರ್ 21, 2019
21 °C

ಟ್ರ್ಯಾಕ್ಟರ್‌ಗೆ ವ್ಯಾನಿಟಿ ಬ್ಯಾಗ್‌ ಸಿಲುಕಿ ಮಹಿಳೆ ಸಾವು

Published:
Updated:

ರಾಯಚೂರು: ಇಲ್ಲಿನ ಇಂದಿರಾನಗರ ನಿವಾಸಿ ಪ್ರಿಯಂಕಾ (25) ಅವರು ಪತಿ ನರೇಶ ಜತೆಗೆ ಬೈಕ್‌ ಹಿಂಬದಿ ಸಂಚರಿಸುವಾಗ ಹಿಡಿದುಕೊಂಡಿದ್ದ ವ್ಯಾನಿಟಿ ಬ್ಯಾಗ್‌, ಪಕ್ಕದಲ್ಲಿ ಸಂಚರಿಸುತ್ತಿದ್ದ ಟ್ರ್ಯಾಕ್ಟರ್‌ ಮಡ್‌ಗಾರ್ಡ್‌ಗೆ ಸಿಲುಕಿಕೊಂಡಿದ್ದರಿಂದ ಕೆಳಗೆ ಬಿದ್ದು ಗಾಯಗೊಂಡು ಮೃತಪಟ್ಟಿರುವ ಘಟನೆ ಮಾವಿನಕೆರೆ ಸಾಯಿಬಾಬಾ ಮಂದಿರ ಹತ್ತಿರ ಗುರುವಾರ ನಡೆದಿದೆ.

ನರೇಶ ಹಾಗೂ ಒಂದು ವರ್ಷದ ಮಗು ತ್ರಿಶಾ ಅಪಘಾತದಿಂದ ಪಾರಾಗಿದ್ದಾರೆ. ಟ್ರ್ಯಾಕ್ಟರ್‌ ಚಾಲಕನ ವಿರುದ್ಧ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಎಸ್‌ಪಿ ಮನವಿ: ಮಹಿಳೆಯರು, ಯುವತಿಯರು ಬೈಕ್‌ ಮೇಲೆ ಸಂಚರಿಸುವಾಗ ವ್ಯಾನಿಟಿ ಬ್ಯಾಗ್‌ನ್ನು ಸೂಕ್ತ ಸ್ಥಳಗಳಲ್ಲಿ ಇಟ್ಟುಕೊಂಡಿರಬೇಕು. ವೇಲ್‌ನ್ನು ಬಿಗಿಯಾಗಿ ಕಟ್ಟಿಕೊಂಡು ಗಾಳಿಯಲ್ಲಿ ಹಾರದಂತೆ ಎಚ್ಚರಿಕೆ ವಹಿಸುವ ಮೂಲಕ ಪ್ರಾಣ ರಕ್ಷಿಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಮನವಿ ಮಾಡಿದ್ದಾರೆ.

 

ಪ್ರತಿಕ್ರಿಯಿಸಿ (+)