ಗುರುವಾರ , ಸೆಪ್ಟೆಂಬರ್ 19, 2019
21 °C

‘ಮಹಿಳೆಯರು ಸ್ವಾವಲಂಬಿಗಳಾಗಿ’

Published:
Updated:
Prajavani

ರಾಯಚೂರು: ಸರ್ಕಾರದ ಯೋಜನೆಗಳಿಂದ ಸಿಗುವ ಅವಕಾಶಗಳನ್ನು ಮಹಿಳೆಯರು ಬಳಸಿಕೊಂಡು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕು ಎಂದು ಕೈಮಗ್ಗ ಜವಳಿ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ಹೊಸಮನಿ ಹೇಳಿದರು.

ನಗರದ ಸಮರ್ಥ ಹೊಲಿಗೆ ಯಂತ್ರ ತರಬೇತಿ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ಇಲಾಖೆಯಿಂದ ಪಡೆದಿರುವ ಕೌಶಲ್ಯವನ್ನು ಸ್ವಾವಲಂಬಿ ಜೀವನಕ್ಕೆ ಬಳಸಿಕೊಳ್ಳಬೇಕು. ಬ್ಯಾಂಕಿನ ಸೌಲಭ್ಯ ಸರಿಯಾಗಿ ಉಪಯೋಗಿಸಿಕೊಂಡು ಸ್ವಂತ ದುಡಿಮೆ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಮುಖ್ಯಸ್ಥೆ ವೀಣಾ ಎಚ್.ಕೊರಾಪುರ್ ಮಾತನಾಡಿ, ಕಾಲಕ್ಕೆ ತಕ್ಕಂತೆ ಮಹಿಳೆಯರು ಸಮಾಜಮುಖಿಯಾಗಿ ಬದಲಾವಣೆ ಹೊಂದುವ ಮೂಲಕ ಸ್ವಂತ ಉದ್ಯೋಗ ಮಾಡಬೇಕು ಎಂದು ಹೇಳಿದರು.

ತರಬೇತಿ ಪಡೆದುಕೊಂಡವರು ಕೌಶಲ್ಯವನ್ನು ಬಳಸಿಕೊಂಡು ಉದ್ಯಮಶೀಲರಾಗಿ ಹೊರಹೊಮ್ಮಬೇಕು. ಕುಟುಂಬದ ಆರ್ಥಕ ಸಬಲೀಕರಣಕ್ಕೆ ಉಪಯೋಗಿಸಬೇಕು ಎಂದರು.

Post Comments (+)