ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಿ: ಜ್ಞಾನ ವಿಕಾಸ ಸಮನ್ವಯಾಧಿಕಾರಿ ವೆಂಕಟಮಾಲ

Last Updated 19 ಡಿಸೆಂಬರ್ 2021, 12:07 IST
ಅಕ್ಷರ ಗಾತ್ರ

ಕಡಗಂದೊಡ್ಡಿ (ಶಕ್ತಿನಗರ): ‘ಮಹಿಳಾ ಸಬಲೀಕರಣ ಸ್ವ-ಉದ್ಯೋಗದ ಮೂಲಕ ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳುವಂತೆ ಪ್ರೇರೇಪಣೆ ನೀಡುವುದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಉದ್ದೇಶವಾಗಿದೆ’ ಎಂದು ಜ್ಞಾನ ವಿಕಾಸ ಸಮನ್ವಯಾಧಿಕಾರಿ ವೆಂಕಟಮಾಲ ಹೇಳಿದರು.

ಚಂದ್ರಬಂಡ ವಲಯದ ಕಡಗಂದೊಡ್ಡಿ ಕಾರ್ಯಕ್ಷೇತ್ರದ ಮಹಾಲಕ್ಷ್ಮಿ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸದಸ್ಯರನ್ನು ,ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಮಹಿಳಾ ಸಬಲೀಕರಣ ಸ್ವ-ಉದ್ಯೋಗ ಅಧ್ಯಯನ ಪ್ರವಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಿಳೆಗೆ ವಿದ್ಯೆ, ಸಂಸ್ಕಾರ, ಆರೋಗ್ಯ, ಆಹಾರ ಸೇರಿದಂತೆ ಎಲ್ಲ ಜ್ಞಾನವೂ ಅತ್ಯಗತ್ಯ. ಈ ಕಾರಣಕ್ಕಾಗಿಯೇ ಜ್ಞಾನ ವಿಕಾಸ ಯೋಜನೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಆದ್ಯತೆ ನೀಡಿದೆ ಎಂದರು.

ಗಿಲ್ಲೆಸೂಗೂರು ವಲಯದ ಗಾಣದಾಳ ಸರಕಾರಿ ಆಸ್ಪತ್ರೆ ಭೇಟಿ ನೀಡಿ ಆಸ್ಪತ್ರೆಯ ಆರೋಗ್ಯ ನಿರಕ್ಷಣಾಧಿಕಾರಿ ಡಾ. ಪೀಟರ್ ಅವರು, ಎಲ್ಲಾ ಸದಸ್ಯರಿಗೆ ಮಾಸ್ಕ್ ವಿತರಿಸಿ, ಕೋವೀಡ್ ಲಸಿಕೆ ಹಾಗೂ ಮಾರ್ಗಸೂಚಿಗಳ ಬಗ್ಗೆ ಮಾಹಿತಿ ನೀಡಿದರು.

ಗಿಲ್ಲೆಸೂಗೂರು ಕಾರ್ಯಕ್ಷೇತ್ರದ ಈರಣ್ಣಸ್ವಾಮಿ ಸಂಘದ ಸದಸ್ಯರಾದ ಧನಲಕ್ಷ್ಮೀ ಅವರು ಸದಸ್ಯರಿಗೆ ಬಟ್ಟೆ ಬ್ಯಾಗ್ ತಯಾರಿ ಮತ್ತು ಇಡ್ಲಿ ರವೆ ತಯಾರಿಸುವ ಯಂತ್ರಗಳ ಬಗ್ಗೆ ಪರಿಚಯಿಸಿ ಮಾರಾಟದ ಕುರಿತು ಹಾಗೂ ಅದರಿಂದ ಪಡೆಯುವ ಆದಾಯದ ಕುರಿತು ಮಾಹಿತಿ ನೀಡಿದರು.

ಸ್ಥಳೀಯ ಸೇವಾಪ್ರತಿನಿಧಿಗಳಾದ ಸುವರ್ಣ, ರಾಧ, ವೀರೇಶ್, ಹೇಮಲತಾ, ಅನ್ನಪೂರ್ಣ, ನರಸಿಂಹ, ಭೀಮೇಶ್, ಸಂಘದ ಸದಸ್ಯರು ಹಾಗೂ ಯೋಜನೆಯ ಫಲಾನುಭವಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT