ಗುರುವಾರ , ನವೆಂಬರ್ 21, 2019
26 °C

ಈ ಸಚಿವರ ಭಾಷಣದಲ್ಲಿ ತಾಳತಪ್ಪಿದ ಕನ್ನಡ: ಬೇಂದ್ರೆ ಇವರ ಬಾಯಲ್ಲಿ ಬೇರೆಂದ್ರ ಆದ್ರು

Published:
Updated:
prajavani

ರಾಯಚೂರು:‌ ರಾಜ್ಯೋತ್ಸವ ನಿಮಿತ್ತ ಜಿಲ್ಲಾ ಪೊಲೀಸ್ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರು ಭಾಷಣ ಮಾಡಿದರು.

ಭಾಷಣದಲ್ಲಿ ಸಚಿವರು ಉಚ್ಛರಿಸಿದ ಕನ್ನಡ ಪದಗಳು ತಾಳ ತಪ್ಪಿದ್ದು ಗಮನ ಸೆಳೆಯಿತು.

ಬೇರೆಂದ್ರ (ಬೇಂದ್ರೆ), ಸಂಘ- ಸಮಸ್ಯೆಗಳು (ಸಂಘ- ಸಂಸ್ಥೆಗಳು), ಸಸಂತ್ರ (ಸ್ವತಂತ್ರ), ಅಂದ್ರಗೀನ (ಅಂದರೆ), ದೇವಪ್ರಾಣಿಯ ಅಶೋಕ (ದೇವನಾಂಪ್ರಿಯ ಅಶೋಕ), ಪ್ರಗತಿ-ಪದಕದಲ್ಲಿ (ಪ್ರಗತಿ ಪಥದಲ್ಲಿ)... ಸಚಿವರು ಭಾಷಣದಲ್ಲಿ ಉಚ್ಚರಿಸಿದ ಕೆಲವು ಪದಗಳಿವು.

ಪ್ರತಿಕ್ರಿಯಿಸಿ (+)