ಸೈದಾಪುರ: ಗಡಿ ಗ್ರಾಮ ಅಜಲಾಪುರದ ಕಾರ್ತಿಕ್ ಜೋಶಿ ಅವರಿಗೆ ‘ಜ್ಯೋತಿಷ್ಯ ಶಿರೋಮಣಿ’ ಹಾಗೂ ‘ಜ್ಯೋತಿಷ್ಯ ವಾಸ್ತು ರತ್ನ’ ಪ್ರಶಸ್ತಿಗಳನ್ನು ನೀಡಿ ಸತ್ಕರಿಸಲಾಯಿತು.

ಈಚೆಗೆ ಹೈದರಾಬಾದ್ನ ಸುರವರಂ ಪ್ರತಾಪರೆಡ್ಡಿ ತೆಲುಗು ವಿಶ್ವವಿದ್ಯಾಲಯದಲ್ಲಿ ನಡೆದ ರಾಜ್ಯಮಟ್ಟದ ಜ್ಯೋತಿಷ್ಯ ವಿಚಾರಗೋಷ್ಠಿ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜೋತಿಷ್ಯ ಶಾಸ್ತ್ರ ಮತ್ತು ವಾಸ್ತು ಕ್ಷೇತ್ರದಲ್ಲಿನ ಉತ್ತಮ ಜ್ಞಾನಕ್ಕೆ ಈ ಪ್ರಶಸ್ತಿಗಳನ್ನು ನೀಡಲಾಗಿದೆ.

‘ದೈವಾನುಗ್ರಹ ಮತ್ತು ಗ್ರಾಮಸ್ಥರ ಸಹಕಾರದಿಂದ ಈ ಗೌರವ ಲಭಿಸಿದೆ. ಈ ಪ್ರತಿಷ್ಠಿತ ಬಿರುದುಗಳು ಮತ್ತು ನನ್ನ ಈ ಸಾಧನೆಯ ಸಂಪೂರ್ಣ ಶ್ರೇಯಸ್ಸು ನನ್ನ ತಾಯಿ ಮತ್ತು ತಂದೆಗೆ ಸಲ್ಲಬೇಕು. ಸಾಮಾನ್ಯ ಜನರ ಸೇವೆ ಮಾಡುವುದರಲ್ಲಿ ನಿರತನಾಗುತ್ತೆನೆ’ ಎಂದು ಕಾರ್ತಿಕ್ ಜೋಶಿ ತಿಳಿಸಿದ್ದಾರೆ.

‘ಗಡಿ ಅಂಚಿನ ಗ್ರಾಮದಲ್ಲಿ ಜನಿಸಿ, ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ, ಅಂತರರಾಜ್ಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದಿರುವುದು ಹೆಮ್ಮೆಯ ವಿಷಯ. ಅಜಲಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರಲ್ಲಿ ಹರ್ಷ ತಂದಿದೆ. ಎಂದು ಶಿಕ್ಷಕ ಯಲ್ಲಪ್ಪ ಪೂಜಾರಿ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-30-430895550

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.