ಹಟ್ಟಿ ಚಿನ್ನದ ಗಣಿ: ಗುರುಗುಂಟಾ ಹೋಬಳಿ ವ್ಯಾಪ್ತಿಗೆ ಬರುವ ಯರಜಂತಿ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಆಲಿಕಲ್ಲು ಸಹಿತ ಮಳೆಯಾಗಿದೆ.

ಯರಜಂತಿ ಗ್ರಾಮದ ಹನುಮಂತಿ ಬಸಯ್ಯ ಎನ್ನುವ ರೈತ ಮಹಿಳೆಯ ಮನೆಯ ತಗಡಿನ ಟಿನ್ಗಳು ಗಾಳಿಗೆ ಹಾರಿ ಹೋಗಿವೆ. ಇದರಿಂದ ಮನೆಯಲ್ಲಿ ಇದ್ದ ಜೋಳ, ಸಜ್ಜೆ ಮಳೆಗೆ ಸಿಲುಕಿ ₹ 75 ಸಾವಿರ ಮೌಲ್ಯದ ದವಸ ಧ್ಯಾನ್ಯಗಳು ಹಾಳಾಗಿವೆ ಎಂದು ಹನುಮಂತಿ ಅಲವತ್ತುಕೊಂಡರು.

ಆಲಿಕಲ್ಲು ಮಳೆಗೆ, ಲಕ್ಷ್ಮಿ, ವೆಂಕಟೇಶ, ದೇವಮ್ಮ ವೆಂಕಟೇಶ, ಹನುಮಂತಿ ಅವರಿಗೆ ಗಾಯವಾಗಿದ್ದು ಗುರುಗುಂಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಗ್ರಾಮಸ್ಧರು ತಿಳಿಸಿದ್ದಾರೆ.

ಮಳೆಗೆ ಹಾನಿಯಾದ ಸ್ಧಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ರೈತ ಮಹಿಳೆಗೆ ಪರಿಹಾರ ಒದಗಿಸಿಕೊಡಬೇಕೆಂದು ಗ್ರಾಮಸ್ಧರು ಒತ್ತಾಯ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-32-192683416

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.