ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೆರೆ ಸಂತ್ರಸ್ತರ ಬೆಂಬಲಕ್ಕೆ ನಿಲ್ಲದ ಸರ್ಕಾರ’

Last Updated 5 ನವೆಂಬರ್ 2019, 10:58 IST
ಅಕ್ಷರ ಗಾತ್ರ

ಸಿರವಾರ: 'ಕಳೆದ ತಿಂಗಳು ಸುರಿದ ಭಾರಿ ಮಳೆಯಿಂದಾಗಿ ಅನೇಕ ಕುಟುಂಬಗಳು ಬೀದಿಪಾಲಾಗಿವೆ. ಅಂತಹ ಕುಟುಂಬಗಳಿಗೆ ಬೆಂಬಲಕ್ಕೆ ನಿಲ್ಲದ ಯಡಿಯೂರಪ್ಪನವರ ಸರ್ಕಾರ ಪರಿಹಾರ ನೀಡುವಲ್ಲಿ ವಿಫಲವಾಗಿದೆ' ಎಂದು ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದರು.

ರಾಯಚೂರಿನಿಂದ ಲಿಂಗಸುಗೂರು ತಾಲ್ಲೂಕಿನ ಜಾ.ನಂದಿಹಾಳ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳ್ಳಿ ಅನಾವರಣ ಕಾರ್ಯಕ್ರಮಕ್ಕೆ ತೆರಳುವಾಗ ಮಾರ್ಗ ಮಧ್ಯೆ ಪಟ್ಟಣದ ಯುವಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಉತ್ತರ ಕರ್ನಾಟಕದ ನೆರೆಯು ಬಡವರ ಜೀವನವನ್ನು ಕಸಿದುಕೊಂಡಿದೆ. ಅವರಿಗೆ ನೆರವಾಗಬೇಕಾಗಿದ್ದ ಸರ್ಕಾರವು ಉಪಚುನಾವಣೆ ಮತ್ತು ಸರ್ಕಾರ ಉಳಿಸಿಕೊಳ್ಳಲು ಕಾಲಹರಣ ಮಾಡುತ್ತಿದೆ ಎಂದು ಟೀಕಿಸಿದರು.

ಈಗ ನಡೆಯುತ್ತಿರುವ ಸರ್ಕಾರವು ತಾತ್ಕಾಲಿಕ ಸರ್ಕಾರವಾಗಿದ್ದು, ಉಪಚುನಾವಣೆ ಫಲಿತಾಂಶದ ನಂತರ ಪತನವಾಗಲಿದೆ ಎಂದರು.

ಮೊದಲಿಗೆ ಅವರು ಕನಕದಾಸರ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿದರು.

ಪಟ್ಟಣ ಪಂಚಾಯಿತಿ ಸದಸ್ಯ ಚನ್ನಬಸವ ಗಡ್ಲ, ಮುಖಂಡರಾದ ಎಚ್.ಕೆ ಅಮರೇಶ, ರಾಘವೇಂದ್ರ, ಶಿವಗೇನಿ, ಯಲ್ಲಪ್ಪ ದೊರೆ, ಬಸವರಾಜ, ವಿರುಪಾಕ್ಷಿಗೌಡ ಮರಾಠ ಸೇರಿದಂತೆ ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT