ಗುರುವಾರ , ಫೆಬ್ರವರಿ 27, 2020
19 °C
11ನೇ ಕೃಷಿ ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವ ಉದ್ಘಾಟನೆ

ಕಷ್ಟಪಟ್ಟು ಓದಿ ಗುರಿ ಸಾಧಿಸಿ: ಚಲನಚಿತ್ರ ಪೋಷಕ ನಟಿ ಸುನೇತ್ರ ಪಂಡಿತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ರಾಯಚೂರು: ಇನ್ನೊಬ್ಬರನ್ನು ನೋಡಿ ಕೊರಗುವುದು ಬೇಡ. ವಿಶ್ವವಿದ್ಯಾಲಯದಲ್ಲಿ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಕಷ್ಟಪಟ್ಟು ಓದಿ, ಅಂದುಕೊಂಡಿರುವ ಗುರಿ ಸಾಧಿಸಿ ಎಂದು ಚಲನಚಿತ್ರ ಪೋಷಕ ನಟಿ ಸುನೇತ್ರ ಪಂಡಿತ್ ಹೇಳಿದರು.

ನಗರದ ಕೃಷಿ ವಿಜ್ಞಾನಗಳ ವಿಶ್ವವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಶುಕ್ರವಾರ ಆಯೋಜಿಸಿದ್ದ 11ನೇ ’ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವ’ ಉದ್ಘಾಟಿಸಿ ಮಾತನಾಡಿದರು.

ಸೌಲಭ್ಯಗಳಿಲ್ಲ ಎಂದು ಇನ್ನೊಬ್ಬರನ್ನು ವಿದ್ಯಾರ್ಥಿಗಳು ದೂರುವುದು ಬೇಡ. ಇದ್ದ ಸೌಲಭ್ಯಗಳನ್ನು ಬಳಸಿಕೊಂಡು ಜೀವನದಲ್ಲಿ ಮುಂದೆ ಸಾಗಬೇಕು. ಜೀವಿಗಳಲ್ಲಿ ಬುದ್ಧಿವಂತ ಜೀವಿ ಮನುಷ್ಯ. ಯೋಚಿಸುವ ಸಾಮರ್ಥ್ಯ ಇದೆ. ಇಂತಹ ಪುಣ್ಯ ಜನ್ಮ ದೇವರು ನಮಗೆ ಕೊಟ್ಟಿದ್ದಾನೆ. ವಿದ್ಯಾರ್ಥಿಗಳು ಜೀವನವನ್ನು ಸಂಪೂರ್ಣವಾಗಿ ಅನುಭವಿಸಬೇಕು ಎಂದು ಹೇಳಿದರು.

ವಿಶ್ವವಿದ್ಯಾಲಯ ಯುವಜನೋತ್ಸವ ಆಯೋಜನೆಯ ಮೂಲ ಉದ್ದೇಶ ಒಬ್ಬರಿಗೆ ಒಬ್ಬರೂ ಸ್ಪಂದನೆಯಾಗುವುದು. ಇದರಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ಎಲ್ಲಾ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ, ಜೀವನದಲ್ಲಿ ಮುಂದೆ ಬನ್ನಿ ಎಂದು ತಿಳಿಸಿದರು.

ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನ ಮಂಡಳಿ ಸದಸ್ಯ ಅಮರೇಶ ಬಲ್ಲಿದವ ಮಾತನಾಡಿ, ಯುವಶಕ್ತಿಯಿಂದ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಯುವಕರು ಸಕಾರಾತ್ಮಕವಾಗಿ ಚಿಂತಿಸಬೇಕು. ಪ್ರಚಾರಕ್ಕೋಸ್ಕರ ನಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಬಾರದು. ಅದು ದೇಶಕ್ಕೆ ಮಾರಕ. ಈ ನಿಟ್ಟಿನಲ್ಲಿ ಸೌಹಾರ್ದತೆ ಭಾವನೆಗಳನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎನ್.ಕಟ್ಟಿಮನಿ ಮಾತನಾಡಿ, ಪ್ರಥಮ, ದ್ವಿತೀಯ ಸ್ಥಾನ ಪಡೆಯಲಿಲ್ಲ ಎಂದು ಬೇಸರ ಪಡುವುದು ಬೇಡ. ವಿದ್ಯಾರ್ಥಿಗಳು ಸಕ್ರಿಯರಾಗಿ ಸ್ಪರ್ಧೆಯಲ್ಲಿ ಭಾಗವಹಿಸಿ ಎಂದರು.

ಶಿಕ್ಷಣ ನಿರ್ದೇಶಕ ಡಾ.ಎಸ್.ಕೆ.ಮೇಟಿ, ಡೀನ್ ಡಾ.ಡಿ.ಎಂ.ಚಂದರಗಿ ಮಾತನಾಡಿದರು. ಕೃಷಿ ವಿಶ್ವವಿದ್ಯಾಲಯ ಕುಲಸಚಿವ ಡಾ.ಎಂ.ಜಿ ಪಾಟೀಲ, ಡಾ.ಎಂ.ನೇಮಿಚಂದ್ರಪ್ಪ, ಡಾ.ಐ.ಶಂಕರೆಗೌಡ, ಡಾ.ಆರ್.ಲೋಕೇಶ, ಡಾ.ಸುರೇಶ ಎಸ್.ಪಾಟೀಲ, ಡಾ.ಎಂ.ವೀರನಗೌಡ ಹಾಗೂ ವ್ಯವಸ್ಥಾಪನ ಮಂಡಳಿ ಸದಸ್ಯರಾದ ಸಿದ್ದಪ್ಪ ಭಂಡಾರಿ, ವೀರನಗೌಡ ಪರಸರೆಡ್ಡಿ ಇದ್ದರು.

ರಾಯಚೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಕೃಷಿ ತಾಂತ್ರಿಕ ಮಹಾವಿದ್ಯಾಲಯ, ಕಲಬುರ್ಗಿ ಕೃಷಿ ವಿಶ್ವವಿದ್ಯಾಲಯ, ಶಹಾಪುರದ ಭೀಮರಾಯನಗುಡಿ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಚಿತ್ರ ಬಿಡಿಸುವ ಸ್ಪರ್ಧೆ, ದೇಶಭಕ್ತಿ ಗೀತೆ, ಸಮೂಹ ಗಾಯನ, ವ್ಯಂಗ್ಯಚಿತ್ರ ರಚನೆ, ರಸಪ್ರಶ್ನೆ, ಏಕಾಂಕ ನಾಟಕ, ರಂಗೋಲಿ, ಚರ್ಚಾ ಸ್ಪರ್ಧೆ, ಆಶುಭಾಷಣ, ಭಾಷಣ ಸ್ಪರ್ಧೆ, ಮೂಕಾಭಿನಯ, ಮಣ್ಣಿನ ಆಕೃತಿ ರಚನೆ, ಜಾನಪದ ನೃತ್ಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು