ಕೋಣಂದೂರು:ಗೋಡೆ ಕುಸಿದು ಮಗು ಸಾವು

7

ಕೋಣಂದೂರು:ಗೋಡೆ ಕುಸಿದು ಮಗು ಸಾವು

Published:
Updated:

ಶಿವಮೊಗ್ಗ: ಜಿಲ್ಲೆಯ ಹಲವೆಡೆ ಗುರುವಾರವೂ ಮಳೆಯ ಅರ್ಭಟ ಮುಂದುವರಿದರೆ, ಕೆಲವೆಡೆ ತಗ್ಗಿದೆ. ತೀರ್ಥಹಳ್ಳಿ ತಾಲ್ಲೂಕು ಕೋಣಂದೂರಿನಲ್ಲಿ ಮನೆಯ ಗೋಡೆ ಕುಸಿದು ನಾಲ್ಕೂವರೆ ವರ್ಷದ ಮಗು ಮೃತಪಟ್ಟಿದೆ.

ಕೂಲಿ ಕಾರ್ಮಿಕ ಅಯುಬ್ ಅವರ ಮಗ ಮಸೂದ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೆಳಿಗಿನ ಜಾವ ಮಗು ಕಾಫಿ ಕುಡಿಯುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ.  ಕುಟುಂಬಕ್ಕೆ ಜಿಲ್ಲಾಡಳುತ ₹ 5 ಲಕ್ಷ ಪರಿಹಾರ ನೀಡಿದೆ. 

ಹೊಸನಗರದಲ್ಲಿ ಸತತ ಮಳೆಗೆ ಕೆಲವೆಡೆ ರಸ್ತೆಯ ಅಂಚು ಕುಸಿದಿದೆ. ಹಲವೆಡೆ ಗಿಡ ಮರಗಳು ರಸ್ತೆಗೆ ಮುರಿದು ಬಿದ್ದಿವೆ. ಇದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿತ್ತು. ತೀರ್ಥಹಳ್ಳಿ ತಾಲ್ಲೂಕಿನಲ್ಲೂ ಭಾರಿ ಮಳೆಯಾಗುತ್ತಿದೆ. ಶಿಕಾರಿಪುರ, ಸೊರಬ, ಶಿವಮೊಗ್ಗದಲ್ಲಿ ಮಳೆಯ ಪ್ರಮಾಣ ಸ್ವಲ್ಪಮಟ್ಟಿಗೆ ತಗ್ಗಿದೆ.

ಭದ್ರಾ ಜಲಾಶಯದಿಂದ 60 ಸಾವಿರ ಕ್ಯುಸೆಕ್‌ ನೀರು ನದಿಗೆ ಹರಿಸುತ್ತಿರುವ ಕಾರಣ ಭದ್ರಾ ನದಿ ಪಾತ್ರದ ಹಲವು ಗ್ರಾಮಗಳಿಗೆ ನೀರು ನುಗ್ಗಿದೆ. ಕೆಲವು ಗ್ರಾಮಗಳಲ್ಲಿ ಮನೆ ಕುಸಿದಿವೆ. ಭದ್ರಾವತಿ ಹೊಸ ಸೇತುವೆ ಮುಳುಗಿದ್ದು ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಎರಡು ದಿನಗಳಿಂದ ಆಗುಂಬೆ ಘಾಟಿಯಲ್ಲಿ ವಾಹನಗಳ ಸಂಚಾರಕ್ಕೆ ಹೇರಿದ್ದ ನಿರ್ಬಂಧ ಸಿಡಿಲಿಸಲಾಗಿದೆ. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !