ಮಳೆ ಮುಂದುವರಿಕೆ: ರೈತರಲ್ಲಿ ಹರ್ಷ

7

ಮಳೆ ಮುಂದುವರಿಕೆ: ರೈತರಲ್ಲಿ ಹರ್ಷ

Published:
Updated:
Deccan Herald

ರಾಮನಗರ: ಜಿಲ್ಲೆಯಾದ್ಯಂತ ಶನಿವಾರ ಮಳೆ ಮುಂದುವರಿದಿದ್ದು, ಕೃಷಿಕ ಸಮುದಾಯವು ನಿಟ್ಟುಸಿರು ಬಿಟ್ಟಿದೆ.

ರಾಮನಗರದಲ್ಲಿ ಮಧ್ಯಾಹ್ನ 3.45ರ ಸುಮಾರಿಗೆ ಮಳೆ ಆರಂಭಗೊಂಡಿದ್ದು, ಒಂದು ಗಂಟೆ ಕಾಲ ಜೋರಾಗಿ ಹನಿಯಿತು. ರಸ್ತೆಗಳಲ್ಲಿ ನೀರು ತುಂಬಿ ಹರಿಯಿತು. ಹಳ್ಳಿಗಳಲ್ಲಿ ಹೊಲ ಗದ್ದೆಗಳಿಗೆ ನೀರು ನುಗ್ಗಿತು.

ಜುಲೈನಲ್ಲಿ ಜಿಲ್ಲೆಯಲ್ಲಿ ಶೇ 50ರಷ್ಟು ಮಳೆಯ ಕೊರತೆ ಇದ್ದು, ಬಿತ್ತನೆ ಕಾರ್ಯಕ್ಕೆ ತೀವ್ರ ಹಿನ್ನಡೆಯಾಗಿತ್ತು. ಶುಕ್ರವಾರ ಮತ್ತೆ ಮಳೆ ಆರಂಭಗೊಂಡಿತ್ತು. ಹೊಲಗಳು ಹಸಿಯಿದ್ದ ಕಾರಣ ಶನಿವಾರ ಹೆಚ್ಚಿನ ರೈತರು ಉಳುಮೆ, ಬಿತ್ತನೆಗೆ ಮುಂದಾಗಲಿಲ್ಲ. ಮಳೆಯಿಂದಾಗಿ ರಾಗಿ ಬಿತ್ತನೆ ಕಾರ್ಯವು ಚುರುಕು ಪಡೆಯುವ ನಿರೀಕ್ಷೆ ಇದೆ.

ಕಳೆದ ವರ್ಷವೂ ಜುಲೈನಲ್ಲಿ ಮಳೆ ಕೈಕೊಟ್ಟಿತ್ತು. ಆದರೆ ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಉತ್ತಮ ವರ್ಷಧಾರೆಯಿಂದ ಬಿತ್ತನೆ ಚುರಕಾಗಿತ್ತು. ಕೆರೆ–ಕಟ್ಟೆಗಳೂ ಭರ್ತಿಯಾಗಿದ್ದವು.

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !