ಬುಧವಾರ, ನವೆಂಬರ್ 20, 2019
27 °C

ಸೊರಬದಲ್ಲಿ ಮುಂದುವರೆದ ಮಳೆ

Published:
Updated:
Prajavani

ಸೊರಬ: ತಾಲ್ಲೂಕಿನಾದ್ಯಂತ ಶುಕ್ರವಾರ ಎಡಬಿಡದೆ ಮಳೆ ಸುರಿಯಿತು.

ಹೊಲ, ಗದ್ದೆಗಳಿಗೆ ಕೆಲಸದ ನಿಮಿತ್ತ ತೆರಳಿದ ರೈತರು ಮಧ್ಯಾಹ್ನವೇ ಜಾನುವಾರುಗಳೊಂದಿಗೆ ಮನೆಯತ್ತ ಹೆಜ್ಜೆ ಹಾಕಿದರು. 

ಕೆಲವು ದಿನಗಳಿಂದ ಸೂರ್ಯನ ಬೆಳಕೆ ಭೂಮಿಗೆ ಬಿದ್ದಿಲ್ಲ. ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವೇ ಇರುತ್ತದೆ. ಮಧ್ಯಾಹ್ನದಿಂದ ಜಿಟಿಜಿಟಿ ಮಳೆ ಆರಂಭಗೊಂಡರೆ 3ಗಂಟೆಯ ನಂತರ ರಭಸವಾಗಿ ಸುರಿಯುತ್ತದೆ. ವಾಹನ ಸವರಾರರು ಹೆಡ್ ಲೈಟ್ ಹಾಕಿ ವಾಹನ ಚಲಾಯಿಸುವ ದೃಶ್ಯಗಳು ಸಮಾನ್ಯವಾಗಿವೆ.

ಈ ಬಾರಿ ಜೂನ್‌ನಿಂದ ಪ್ರಾರಂಭವಾಗಿರುವ ಮಳೆ ಇದುವರೆಗೂ ಬಿಟ್ಟಿಲ್ಲ. ಇದರಿಂದ ಕಟಾವಿಗೆ ಬಂದಿರುವ ಜೋಳದ ಬೆಳೆಗೆ ತೊಂದರೆಯಾದರೆ, ಭತ್ತದ ತೆನೆಯಲ್ಲಿನ ಹೂವು ಉದುರುತ್ತವೆ. ರಭಸವಾಗಿ ಮಳೆ ಸುರಿಯುತ್ತಿರುವುದರಿಂದ ಕಾಳು ಗಟ್ಟಿಗೊಳ್ಳಲು ಸಾಧ್ಯವಾಗುತ್ತಿಲ್ಲ. ಮಳೆ ನಿರಂತರವಾಗಿ ಬೀಳುತ್ತಿರುವುದರಿಂದ ಸಮೃದ್ಧ ಬೆಳೆ ಬರುವುದು ಕಷ್ಟ ಎಂಬುದು ರೈತರು ಆತಂಕ.

ಪ್ರತಿಕ್ರಿಯಿಸಿ (+)