ಮಂಗಳವಾರ, ಏಪ್ರಿಲ್ 13, 2021
31 °C

ಫ್ಲೆಕ್ಸ್‌ನಲ್ಲಿ ‘ಮುಖ್ಯಮಂತ್ರಿ’ ಪದವೇ ನಾಪತ್ತೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಇದೇ 23ರಂದು ಚಾಮುಂಡೇಶ್ವರಿ ಕರಗ ಮಹೋತ್ಸವ ನಡೆಯಲಿದ್ದು, ಹಬ್ಬಕ್ಕೆ ಶುಭಾಶಯ ಕೋರುವ ಫ್ಲೆಕ್ಸ್‌ಗಳಲ್ಲಿ ಎಚ್‌.ಡಿ. ಕುಮಾರಸ್ವಾಮಿ ಅವರ ಚಿತ್ರ ಇದೆಯಾದರೂ ಅದರ ಮುಂದೆ ‘ಮುಖ್ಯಮಂತ್ರಿ’ ಎಂಬ ಪದವೇ ನಾಪತ್ತೆಯಾಗಿದೆ.

ಈ ಮೂಲಕ ಮುಖ್ಯಮಂತ್ರಿ ಪದಚ್ಯುತಿ ಇಲ್ಲವೇ ರಾಜೀನಾಮೆ ಸಾಧ್ಯತೆ ಕುರಿತು ಜೆಡಿಎಸ್‌ ಮುಖಂಡರಿಗೆ ಮೊದಲೇ ಖಾತ್ರಿಯಾಗಿದೆಯೇ ಎಂಬ ಅನುಮಾನ ಮೂಡಿದೆ. ಪ್ರತಿ ವರ್ಷ ಹಬ್ಬಕ್ಕೆ ಜೆಡಿಎಸ್‌ ಮುಖಂಡರ ನೇತೃತ್ವದಲ್ಲಿ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುತ್ತಾ ಬರಲಾಗಿದೆ. ಕುಮಾರಸ್ವಾಮಿ ಅವರು ತಪ್ಪದೇ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ. ಅಂತೆಯೇ ಕಾರ್ಯಕರ್ತರು ಹಬ್ಬಕ್ಕೆ ಫ್ಲೆಕ್ಸ್‌ಗಳನ್ನು ಅಳವಡಿಸುತ್ತಾ ಬಂದಿದ್ದಾರೆ. ಕಳೆದ ವರ್ಷ ಅಳವಡಿಸಿದ್ದ ಫ್ಲೆಕ್ಸ್‌ಗಳಲ್ಲಿ ಕುಮಾರಸ್ವಾಮಿ ಹೆಸರಿನ ಹಿಂದೆ ಮುಖ್ಯಮಂತ್ರಿ ಎಂಬ ಪದ ಇತ್ತು. ಆದರೆ ಈ ಬಾರಿ ಅದ್ಯಾಕೋ ಆ ಪದವನ್ನು ಮರೆಮಾಚಲಾಗಿದೆ.

ಒಂದು ವೇಳೆ ಸೋಮವಾರವೇ ಮುಖ್ಯಮಂತ್ರಿ ರಾಜೀನಾಮೆ ನೀಡಿದರೆ ಹಬ್ಬದಂದು ಆಗುವ ಮುಜುಗರ ತಪ್ಪಿಸಿಕೊಳ್ಳಲು ಪಕ್ಷದ ವರಿಷ್ಠರು ಈ ಬಗ್ಗೆ ಸೂಚನೆ ನೀಡಿರಬಹುದು ಎಂಬ ಅನುಮಾನವೂ ಮೂಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.