ಶುಕ್ರವಾರ, ನವೆಂಬರ್ 22, 2019
22 °C
ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ಪೊಲೀಸರ ಹದ್ದಿನ ಕಣ್ಣು: 1700 ಪ್ರಕರಣ ದಾಖಲು

9 ದಿನದಲ್ಲಿ ₹ 10 ಲಕ್ಷ ದಂಡ ವಸೂಲಿ!

Published:
Updated:

ರಾಮನಗರ: ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಆಗಿ ದಂಡದ ಹೊಸ ದರಪಟ್ಟಿ ಜಾರಿಗೊಂಡ ಬಳಿಕ ಪೊಲೀಸರಿಂದ ದಂಡ ಶುಲ್ಕ ಸಂಗ್ರಹದಲ್ಲೂ ಭಾರಿ ಏರಿಕೆ ಆಗಿದೆ. ಕಳೆದ ಒಂಭತ್ತು ದಿನದಲ್ಲಿಯೇ 1700 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, ಬರೋಬ್ಬರಿ ₹ 9.97 ಲಕ್ಷ ದಂಡ ಸಂಗ್ರಹವಾಗಿದೆ.

ಜಿಲ್ಲೆಯಲ್ಲಿ ಕಳೆದ ಆಗಸ್ಟ್‌ 15ರಿಂದ ಹೆಲ್ಮೆಟ್‌ ಕಡ್ಡಾಯ ನಿಯಮ ಜಾರಿಗೆ ಬಂದಿದೆ. ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿಯೂ ಪೊಲೀಸರು ವಾಹನಗಳನ್ನು ನಿರಂತರ ತಪಾಸಣೆಗೆ ಒಳಪಡಿಸುತ್ತಿದ್ದಾರೆ. ಅದರಲ್ಲೂ ಈ ತಿಂಗಳ ಆರಂಭದಿಂದ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಭಾರಿ ದಂಡ ಬೀಳುತ್ತಿದೆ.

ಯಾವ ದಿನ ಎಷ್ಟು?: ಇದೇ ತಿಂಗಳ 1ರಂದು 583 ಪ್ರಕರಣಗಳನ್ನು ದಾಖಲಿಸಲಾಗಿದ್ದು ₹ 1.02 ಲಕ್ಷ ಶುಲ್ಕ ದಂಡದ ರೂಪದಲ್ಲಿ ಸಂಗ್ರಹವಾಗಿದೆ. 2ರಂದು 222 ಪ್ರಕರಣಗಳಿಂದ ₹ 1 ಲಕ್ಷ ಬಂದಿದೆ. 3ರಂದು 317 ಪ್ರಕರಣಗಳಿಂದ ₹ 2 ಲಕ್ಷ, 4ರಂದು 60 ಪ್ರಕರಣಗಳಿಂದ ₨60 ಸಾವಿರ, 5ರಂದು 84 ಪ್ರಕರಣಗಳಿಂದ ₹ 97 ಸಾವಿರ ಸಂಗ್ರಹವಾಗಿದೆ.

ಅಂಂತೆಯೇ 6ರಂದು ಪೊಲೀಸರು 126 ಪ್ರಕರಣಗಳನ್ನು ದಾಖಲಿಸಿದ್ದು ₹ 1.32 ಲಕ್ಷ ದಂಡ ವಸೂಲಿ ಮಾಡಿದ್ದಾರೆ. 7ರಂದು 211 ಪ್ರಕರಣಗಳಿಂದ ₹ 2.12 ಲಕ್ಷ ಹಾಗೂ 8ರಂದು 97 ಪ್ರಕರಣಗಳಿಂದ ₹ 91 ಸಾವಿರ ಶುಲ್ಕದ ರೂಪದಲ್ಲಿ ವಸೂಲಿ ಆಗಿದೆ.

ಪ್ರತಿಕ್ರಿಯಿಸಿ (+)