ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

14ರಿಂದ ಕರಗ, ಜಾತ್ರಾ ಮಹೋತ್ಸವ

Last Updated 12 ಮಾರ್ಚ್ 2019, 14:22 IST
ಅಕ್ಷರ ಗಾತ್ರ

ಸಾತನೂರು (ಕನಕಪುರ): ತಾಲ್ಲೂಕಿನ ಸಾತನೂರು ಹೋಬಳಿ ಹಲಸೂರು ಗ್ರಾಮದಲ್ಲಿನ ಶ್ರೀ ವೆಂಕಟೇಶ್ವರಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಹಾಗೂ ಶ್ರೀ ವೆಂಕಟೇಶ್ವರಸ್ವಾಮಿ ಸೇವಾ ಟ್ರಸ್ಟ್‌ ವತಿಯಿಂದ 17ನೇ ವರ್ಷದ ಕರಗ ಹಾಗೂ ಜಾತ್ರಾ ಮಹೋತ್ಸವ ಮಾರ್ಚ್‌ 15 ಮತ್ತು 16ರಂದು ನಡೆಯಲಿದೆ.

15 ರಂದು ಶ್ರೀ ವಿಳಂಬ ನಾಮ ಸಂವತ್ಸರ ಪಾಲ್ಗುಣ ಶುದ್ಧ ಶುಕ್ಲ ಪಕ್ಷದ ನವಮಿ ಬ್ರಾಹ್ಮಿ ಲಗ್ನದಲ್ಲಿ ನವಗ್ರಹ ಪೂಜೆ, ನವಗ್ರಹ ಹೋಮ, ಗಣಹೋಮ ಹಾಗೂ ರಾಕ್ಟೋಘ್ನ ಹೋಮ, ರಕ್ಷಾಬಂಧನ, ಕಳಸಾರಾಧನೆ, ಶ್ರೀ ಲಕ್ಷ್ಮೀ ಸಹಸ್ರ ಶ್ರೀನಿವಾಸಸ್ವಾಮಿ ಹೋಮ ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.

16 ರಂದು ಪಾಲ್ಗುಣ ಶುಕ್ಲ ಪಕ್ಷದ ದಶಮಿ ಕಳಸಾರಾದನೆಗೆ ದೇವರನ್ನು ತರುವುದು ಹಾಗೂ ಮಧ್ಯಾಹ್ನ 12 ಗಂಟೆಗೆ ಕರಗ ಉತ್ಸವ ಮಹಾ ಮಂಗಳಾರತಿ, ವೆಂಕಟೇಶ್ವರಸ್ವಾಮಿ ದೇವರ ಬಸವ ಮೆರವಣಿಗೆ ಉತ್ಸವದ ನಂತರ ಅನ್ನ ಸಂತರ್ಪಣೆ ಮಾಡಲಾಗುವುದು.

ಸಂಜೆ ಶ್ರೀದೇವಿ, ಭೂದೇವಿ, ವೆಂಕಟೇಶ್ವರ ಪಲ್ಲಕ್ಕಿ ಉತ್ಸವ , ಶ್ರೀ ಹೆಬ್ಬೆಟ್ಟರಾಯಸ್ವಾಮಿ, ಮುತ್ತತ್ತಿ ಪಾದದರೆ ಶ್ರೀ ಆಂಜನೇಯ ಮೂರ್ತಿ, ಶ್ರೀ ಪಿರಿಯಾಪಟ್ಟಣದಮ್ಮ ದೇವಿ ಪೂಜಾ ಕುಣಿತ ಮತ್ತು ಮೆರವಣಿಗೆ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ.

ರಾತ್ರಿ 10 ಗಂಟೆಗೆ ಭಜನೆ ಏರ್ಪಡಿಸಲಾಗಿದೆ. 22 ರಂದು ಮಧ್ಯಾಹ್ನ ಮರಿಸೇವೆ ಮಾಡಿ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

ದೇಗುಲ ಮಠದ ಶ್ರೀ ಮುಮ್ಮುಡಿ ನಿರ್ವಾಣ ಸ್ವಾಮಿ ಸಾನ್ನಿಧ್ಯ ವಹಿಸಲಿದ್ದಾರೆ. ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಎಚ್.ಕೆ.ಶ್ರೀಕಂಠು, ನಗರಸಭೆ ಮಾಜಿ ಅಧ್ಯಕ್ಷ ಕೆ.ಎನ್.ದಿಲೀಪ್ ಹಾಗೂ ಹಲವಾರು ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಟ್ರಸ್ಟ್ ಪ್ರಕಟಣೆಯಲ್ಲಿ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT