ಮಂಗಳವಾರ, ನವೆಂಬರ್ 19, 2019
29 °C

58 ಲೀಟರ್ ಅಕ್ರಮ ಮದ್ಯ ನಾಶ

Published:
Updated:
Prajavani

ಚನ್ನಪಟ್ಟಣ: ಕಳೆದ ಲೋಕಸಭಾ ಚುನಾವಣೆ ವೇಳೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದ ಅಕ್ರಮ ಮದ್ಯವನ್ನು ಅಬಕಾರಿ ಪೊಲೀಸರು ಪಟ್ಟಣದ ಅಬಕಾರಿ ಇನ್‌ಸ್ಪೆಕ್ಟರ್ ಕಚೇರಿಯಲ್ಲಿ ಶುಕ್ರವಾರ ನಾಶಪಡಿಸಿದರು.

ಚನ್ನಪಟ್ಟಣ ನಗರ ಹಾಗೂ ತಾಲ್ಲೂಕಿನಾದ್ಯಾಂತ ಮದ್ಯ ಅಕ್ರಮ ಸಾಗಾಣಿಕೆ ಹಾಗೂ ಮಾರಾಟದ ಸುಮಾರು 8 ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 58 ಲೀಟರ್ ಮದ್ಯ, 3 ಲೀಟರ್ ಬಿಯರ್ ಅನ್ನು ನಾಶಪಡಿಸಲಾಯಿತು.

‘ಜಿಲ್ಲಾಧಿಕಾರಿಗಳ ಆದೇಶದಂತೆ ಎಲ್ಲ ಅಕ್ರಮ ಮದ್ಯವನ್ನು ನಾಶಪಡಿಸಲಾಗುತ್ತಿದೆ. ಮದ್ಯ ಅಕ್ರಮ ಮಾರಾಟ ಕಾನೂನು ಬಾಹಿರವಾಗಿದ್ದು, ಸಂಗ್ರಹ ಹಾಗೂ ಮಾರಾಟ ಪ್ರಕರಣಗಳು ಕಂಡು ಬಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಅಕ್ರಮ ಮದ್ಯ ನಾಶದ ನೇತೃತ್ವ ವಹಿಸಿದ್ದ ರಾಮನಗರ ಉಪ ವಿಭಾಗದ ಅಬಕಾರಿ ಡಿವೈಎಸ್‌ಪಿ ಪ್ರಕಾಶ್ ಪಾಟೀಲ್ ತಿಳಿಸಿದರು.

ಕರ್ನಾಟಕ ರಾಜ್ಯ ಪಾನೀಯ ನಿಯಮ ನಿಗಮಿತ ವ್ಯವಸ್ಥಾಪಕ ಶಿವಲಿಂಗಯ್ಯ, ಕಂದಾಯ ಇಲಾಖೆ ಅಧಿಕಾರಿ ಗಿರೀಶ್, ಅಬಕಾರಿ ನಿರೀಕ್ಷಕ ಡಿ.ಸುನೀಲ್, ಉಪ ನಿರೀಕ್ಷಕ ಜಿ.ಕೆ.ರಾಜೇಂದ್ರ, ಪರಿಕ್ಷಾರ್ಥ ಅಬಕಾರಿ ಉಪ ನಿರೀಕ್ಷಕ ಸುರೇಶ್ ಕುಮಠೆ, ಸಿಬ್ಬಂದಿಗಳಾದ ವಸಂತಮ್ಮ, ಸುರೇಶ್ ಉಜ್ಜಿನಿ, ಮಲ್ಲಿಕಾರ್ಜುನ, ಜಯರಾಮು, ಆದಿತ್ಯ ಹಾಗೂ ಸಿಬ್ಬಂದಿ ಇದ್ದರು.

ಪ್ರತಿಕ್ರಿಯಿಸಿ (+)