ಶುಕ್ರವಾರ, ಅಕ್ಟೋಬರ್ 18, 2019
28 °C

ನಿವೇಶನದ ಖಾತೆಗಾಗಿ ಲಂಚ: ಎಸಿಬಿ ದಾಳಿ

Published:
Updated:
Prajavani

ರಾಮನಗರ: ನಿವೇಶನಗಳ ಖಾತೆ ಮಾಡಿಕೊಡಲು ₹1 ಲಕ್ಷ ಲಂಚ ಪಡೆಯುತ್ತಿದ್ದ ಕುಂಬಳಗೂಡು ಗ್ರಾಮ ಪಂಚಾಯಿತಿಯ ಸದಸ್ಯ ಜಿ. ನಾರಾಯಣ ಗುರುವಾರ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದರು.

ಕೆಂಗೇರಿ ನಿವಾಸಿ ಮಂಜುನಾಥ್‌ ಎಂಬುವರು ಕುಂಬಳಗೂಡು ಗ್ರಾಮದ ಸರ್ವೆ ಸಂಖ್ಯೆ 158 ಹಾಗೂ 159ರಲ್ಲಿ ಲೇಔಟ್ ಅಭಿವೃದ್ಧಿ ಮಾಡಿ ನಿವೇಶನ ಮಾರಾಟ ಮಾಡಿದ್ದರು. ಆದರೆ ಇದಕ್ಕೆ ಗ್ರಾ.ಪಂ. ಅನುಮತಿ ಪಡೆದಿಲ್ಲವೆಂದು ನಾರಾಯಣ ಆಕ್ಷೇಪ ಎತ್ತಿದ್ದರು.

ಪ್ರತಿಯಾಗಿ ಪ್ರತಿ ನಿವೇಶನಕ್ಕೆ ಖಾತೆ ಮಾಡಿಕೊಡಲು ₹1.5 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಮಂಜುನಾಥ್‌ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದು, ಅವರ ಸೂಚನೆಯಂತೆ ₹1 ಲಕ್ಷ ಲಂಚ ನೀಡುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದರು.

Post Comments (+)