ಗುರುವಾರ , ಅಕ್ಟೋಬರ್ 6, 2022
24 °C
ಕಾರಿನಲ್ಲಿ ಜಾಲಿ ರೈಡ್‌ಗೆ ಹೊರಟಿದ್ದ ವಿದ್ಯಾರ್ಥಿಗಳು

ಅಪಘಾತ: ಬೈಕ್ ಸವಾರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆ. ಗೊಲ್ಲಹಳ್ಳಿ ಸಮೀಪ ಶುಕ್ರವಾರ ಕಾರ್ ಒಂದು ಎರಡು ಸ್ಕೂಟರ್‌ಗಳಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಒಬ್ಬರು ಮೃತಪಟ್ಟು ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಕುಳ್ಳೆಗೌಡನಪಾಳ್ಯದ ನಿವಾಸಿ ಗಿರಿಯಪ್ಪ (50) ಮೃತರು. ಕೆ. ಗೊಲ್ಲಹಳ್ಳಿ ಗ್ರಾಮದ ವಿದ್ಯಾರ್ಥಿನಿಯರಾದ ಯೋಗಿತಾ (10), ಚರಿತಾ (8) ಹಾಗೂ ಗೋಣಿಪುರ ಗ್ರಾಮದ ಲತೇಶ್ (45) ಎಂಬುವರು ಗಾಯಗೊಂಡಿದ್ದಾರೆ.

ಗಿರಿಯಪ್ಪ ತಮ್ಮ ಸಂಬಂಧಿಕರಾದ ವಿದ್ಯಾರ್ಥಿನಿಯರನ್ನು ಶಾಲೆಗೆ ಬಿಡುವ ಸಲುವಾಗಿ ಸ್ಕೂಟರಿನಲ್ಲಿ ತೆರಳುತ್ತಿದ್ದರು. ಮತ್ತೊಂದು ಸ್ಕೂಟರ್‌ನಲ್ಲಿ ಲತೇಶ್ ಸಹ ಕುಂಬಳಗೋಡು ಕಡೆ ತೆರಳುತ್ತಿದ್ದರು. ಈ ವೇಳೆ ಕುಂಬಳಗೋಡಿನಿಂದ ಬಿಡದಿ ಕಡೆಗೆ ಬರುತ್ತಿದ್ದ ಕಾರ್ ಚಾಲಕನ ಅಜಾಗರೂಕತೆಯಿಂದ ಸ್ಕೂಟರ್‌ಗಳಿಗೆ ಡಿಕ್ಕಿ ಹೊಡೆದಿದೆ. ಸ್ಥಳೀಯರು ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದು, ಗಿರಿಯಪ್ಪ ತೀವ್ರ ಗಾಯಗಳಿಂದ ಮಾರ್ಗ ಮಧ್ಯೆಯೇ ಮೃತಪಟ್ಟರು.

ಜಿಗಣಿ ಬಳಿಯ ಖಾಸಗಿ ಕಾಲೇಜೊಂದರ ಮೂವರು ವಿದ್ಯಾರ್ಥಿಗಳು ಹಾಗೂ ಇಬ್ಬರು ವಿದ್ಯಾರ್ಥಿನಿಯರು ಸ್ವಿಫ್ಟ್‌ ಕಾರಿನಲ್ಲಿ ಬೆಳಿಗ್ಗೆ 8.30ರ ಸುಮಾರಿಗೆ ಬಿಡದಿಗೆ ಜಾಲಿರೈಡ್ ಹೊರಟಿದ್ದರು ಎನ್ನಲಾಗಿದೆ. ಈ ವೇಳೆ ಅಪಘಾತ ಸಂಬಂಧಿಸಿದ್ದು, ಅಲ್ಲಿಂದ ಪರಾರಿಯಾದ ವಿದ್ಯಾರ್ಥಿಗಳು ಕಗ್ಗಲೀಪುರ ಠಾಣೆಗೆ ಬಂದು ಶರಣಾಗಿದ್ದಾರೆ. ಕಗ್ಗಲೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.