ಮರಕ್ಕೆ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕುಸುಮ ಅವರ ತಂದೆ ನಂಜುಂಡಪ್ಪ (56), ಶಾರದಮ್ಮ (50), ತಾಯಿ ಭದ್ರಮ್ಮ (80) ಹಾಗೂ ನಂಜುಂಡಪ್ಪ ಸ್ನೇಹಿತ ನಾಗರಾಜು (54) ಸ್ಥಳದಲ್ಲೇ ಮೃತಪಟ್ಟಿದ್ದರು. ದಂಪತಿಯ ಏಕೈಕ ಪುತ್ರಿಯಾಗಿದ್ದ ಕುಸುಮ ಅವರು, ಬೆಂಗಳೂರಿನ ಕಾಲೇಜೊಂದರಲ್ಲಿ ಎಂ.ಬಿಎ ಓದುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.