ಅಪಘಾತ: ಪಾದಚಾರಿ ಸಾವು

ಬುಧವಾರ, ಮಾರ್ಚ್ 27, 2019
22 °C

ಅಪಘಾತ: ಪಾದಚಾರಿ ಸಾವು

Published:
Updated:
Prajavani

ರಾಮನಗರ: ತಾಲ್ಲೂಕಿನ ಪಾಲಬೋವಿದೊಡ್ಡಿ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಬೈಕ್‌ ಡಿಕ್ಕಿಯಾಗಿ ಗ್ರಾಮದ ನಿವಾಸಿ ನಿಂಗಯ್ಯ (68) ಮೃತಪಟ್ಟರು.

ಬೆಳಗ್ಗೆ 8 ಗಂಟೆ ಸುಮಾರಿಗೆ ಅವರು ಗ್ರಾಮದ ಹಾಲಿನ ಡೇರಿ ಸಮೀಪ ರಸ್ತೆ ಬದಿಯಲ್ಲಿ ನಡೆದುಕೊಂಡು ಹೊರಟಿದ್ದ ಸಂದರ್ಭ ಬೈಕ್‌ ಡಿಕ್ಕಿಯಾಯಿತು. ಇದರಿಂದ ತಲೆಗೆ ತೀವ್ರ ಪೆಟ್ಟಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆಗೆ ಸ್ಪಂದಿಸದೇ ಅವರು 10.30ರ ಸುಮಾರಿಗೆ ಕೊನೆಯುಸಿರೆಳೆದರು.

ನಿಂಗಯ್ಯ ಅವರಿಗೆ ಪತ್ನಿ, ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ. ಮಂಗಳವಾರ ಬೆಳಿಗ್ಗೆ ಪಾಲಬೋವಿದೊಡ್ಡಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಅಪಘಾತದ ಸಂಬಂಧ ರಾಮನಗರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !