ಎಚ್‌.ಸಿ.ಬಾಲಕೃಷ್ಣ ಉದ್ಯಾನ ಪುನಶ್ಚೇತನಕ್ಕೆ ಕ್ರಮ

ಮಂಗಳವಾರ, ಏಪ್ರಿಲ್ 23, 2019
33 °C

ಎಚ್‌.ಸಿ.ಬಾಲಕೃಷ್ಣ ಉದ್ಯಾನ ಪುನಶ್ಚೇತನಕ್ಕೆ ಕ್ರಮ

Published:
Updated:

ಮಾಗಡಿ: ತಿರುಮಲೆ ಎಚ್‌.ಸಿ.ಬಾಲಕೃಷ್ಣ ಉದ್ಯಾನದ ಕೊಳವೆಬಾವಿಯ ನೀರನ್ನು ಪಟ್ಟಣದ ಜನತೆಗೆ ಕುಡಿಯಲು ಬಳಸಲಾಗುತ್ತಿದೆ. ಒಣಗಿರುವ ಉದ್ಯಾನದ ಪುನಶ್ಚೇತನಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಪುರಸಭೆ ಎಂಜಿನಿಯರ್‌ ಪ್ರಶಾಂತ್‌ ಶೆಟ್ಟಿ ತಿಳಿಸಿದರು.

‘ಪ್ರಜಾವಾಣಿ’ ನಗರ ಸಂಚಾರದಲ್ಲಿ ಉದ್ಯಾನದ ಬಗ್ಗೆ ಬೆಳಕು ಚೆಲ್ಲಿದೆ. ಅವರ ಆಶಯದಂತೆ ಅಭಿವೃದ್ಧಿ ಪಡಿಸುವುದು ನಮ್ಮ ಉದ್ದೇಶ’ ಎಂದರು. ಬುಧವಾರ ಸಂಜೆ ಉದ್ಯಾನಕ್ಕೆ ಭೇಟಿ ನೀಡಿ ಅಲ್ಲಿನ ದುಸ್ಥಿತಿ ಪರಿಶೀಲಿಸಿ ಅವರು ಮಾತನಾಡಿದರು.

ಸಾರ್ವಜನಿಕರ ಸಹಕಾರದಿಂದ ಮಾತ್ರ ಯೋಜನೆಗಳು ಯಶಸ್ವಿಯಾಗಲಿವೆ. ರಸ್ತೆ ಬದಿ ಹಾದುಹೋಗಿರುವ ಕೊಳವೆಬಾವಿಯ ಪೈಪ್‌ ಅನ್ನು ಯಾರೋ ಒಡೆದು ಹಾಕಿ ನೀರೆಲ್ಲ ಪೋಲಾಗುವಂತೆ ಮಾಡಿದ್ದಾರೆ. ಒಡೆದು ಹೋಗಿರುವ ಪೈಪ್‌ ಬದಲಿಸಿ, ಉದ್ಯಾನನಲ್ಲೆ ಸಮಪರ್ಕವಾಗಿ ನೀರು ಸರಬರಾಜು ಮಾಡಿ ಹಸಿರು ನಳನಳಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !