‘ಬಡ ಮಕ್ಕಳನ್ನು ದತ್ತು ಸ್ವೀಕರಿಸಿ’

ಭಾನುವಾರ, ಜೂಲೈ 21, 2019
28 °C

‘ಬಡ ಮಕ್ಕಳನ್ನು ದತ್ತು ಸ್ವೀಕರಿಸಿ’

Published:
Updated:
Prajavani

ಕುದೂರು(ಮಾಗಡಿ): ರೈತರ ಋಣ ತೀರಿಸಲು ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವುದು ಪುಣ್ಯದ ಕೆಲಸ ಎಂದು ‘ಅವಿರತ ಚಾರಣಿಗರ ತಂಡ’ದ ಯತೀಶ್‌ ಕುಮಾರ್‌ ಅಭಿಪ್ರಾಯಪಟ್ಟರು.  ‌‌

ಚಾರಣಿಗರ ತಂಡದಿಂದ 11ನೇ ವರ್ಷದ ಅಂಗವಾಗಿ ಉಚಿತ ನೋಟ್‌ ಪುಸ್ತಕ ವಿತರಿಸಿ ಅವರು ಮಾತನಾಡಿದರು.

ಬಹುರಾಷ್ಟ್ರೀಯ ಕಂಪನಿಗಳು ಮತ್ತು ಉದ್ಯಮಿಗಳು ಬಡವರ ಮಕ್ಕಳನ್ನು ದತ್ತು ಸ್ವೀಕರಿಸಿ ಶಿಕ್ಷಣ ಕೊಡಿಸಿ ರೈತರ ಋಣ ತೀರಿಸಲು ಮುಂದಾಗಬೇಕು ಎಂದರು.

ಚಾರಣಿಗರ ತಂಡದ ಸದಸ್ಯೆ ತೇಜಸ್ವಿನಿ ಮಾತನಾಡಿ, ಗ್ರಾಮೀಣ ಭಾಗದ ಬಡ ಬಾಲಕಿಯರಿಗೆ ಎಲ್ಲರೂ ಹೆಚ್ಚಿನ ನೆರವು ನೀಡಿ ಅವರ ಜೀವನ ಸುಧಾರಣೆಗೆ ಪ್ರೋತ್ಸಾಹ ನೀಡಬೇಕು ಎಂದರು.

ಸದಸ್ಯರಾದ ಗಣಪತಿ ಭಟ್, ಜಗದಾಂಬ, ಶ್ರೀನಿವಾಸಯ್ಯ, ಲಾವಣ್ಯ ಚನ್ನಪ್ಪ, ಅರುಣ್‌ ಕುಮಾರ್, ಲಕ್ಷ್ಮೀನಾರಾಯಣ್, ಶಂಕರ್, ಸುಮಂತ್‌, ಕೇಶವ್ ಇದ್ದರು.

ಒಂಭತ್ತನಗುಂಟೆ, ಗೊಲ್ಲಹಳ್ಳಿ, ತಿಪ್ಪಸಂದ್ರ ಹೋಬಳಿ ಬಸವನಪಾಳ್ಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಉಚಿತ ಪುಸ್ತಕ ವಿತರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !