ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಸದ್ಬಳಕೆಗೆ ಸಲಹೆ

Last Updated 24 ಮಾರ್ಚ್ 2019, 13:43 IST
ಅಕ್ಷರ ಗಾತ್ರ

ಮಾಗಡಿ: ನೀರಿನ ಸದ್ಬಳಕೆ ಮಾಡದಿದ್ದರೆ ತೊಂದರೆಗೆ ಸಿಲುಕಬೇಕಾದೀತು ಎಂದು ಕೃಷಿ ವಿಜ್ಞಾನಿ ಡಾ.ಸವಿತಾ.ಎಂ.ಎಸ್‌ ಆತಂಕ ವ್ಯಕ್ತಪಡಿಸಿದರು.

ತಾಲ್ಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಕಿಸಾನ್‌ ಮೇಳ ಮತ್ತು ವಿಶ್ವ ಜಲದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ದಿನ ನಿತ್ಯದ ಚಟುವಟಿಕೆಗಳಿಗೆ ಹಣ ಕೊಟ್ಟು ನೀರು ಖರೀದಿಸುವ ಕಾಲ ಎದುರಿಸಬೇಕಾಗಿದೆ. ನಾವೆಲ್ಲರೂ ನೀರು ಪೋಲು ಮಾಡದೆ ಕಲುಷಿತ ನೀರಿನ ಮರುಬಳಕೆ, ಮಳೆ ನೀರು ಸಂಗ್ರಹ ಮತ್ತು ಸಂರಕ್ಷಣೆ ಮಾಡಬೇಕು ಎಂದರು.

ಜಂಟಿ ಕೃಷಿ ನಿರ್ದೇಶಕ ಅಶೋಕ್ ಮಾತನಾಡಿ, ನೀರಿನ ಸಂರಕ್ಷಣೆಯಲ್ಲಿ ಇಲಾಖೆ ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆ ವಿವರಿಸಿದರು.

ವಿಜ್ಞಾನಿ ಪ್ರೀತು ಮಾತನಾಡಿ, ಮಣ್ಣು ಮತ್ತು ನೀರು ಸಂರಕ್ಷಣೆ ಕುರಿತು ಸಮಗ್ರ ಮಾಹಿತಿ ನೀಡಿದರು.

ವಿಜ್ಞಾನಿ ಡಾ. ದಿನೇಶ್ ಮಾತನಾಡಿ, ಸಮಗ್ರ ಬೇಸಾಯ ಪದ್ಧತಿಯಲ್ಲಿ ನೀರಿನ ಬಳಕೆ ಮಹತ್ವದ ಬಗ್ಗೆ ತಿಳಿಸಿದರು.
ಡಾ.ರಾಜೇಂದ್ರ ಪ್ರಸಾದ್ ಮಾವಿನಲ್ಲಿ ಸಮಗ್ರ ಕೀಟ ಮತ್ತು ಪೀಡೆ ನಿರ್ವಹಣೆ ಕುರಿತು ಮಾಹಿತಿ ಹಂಚಿಕೊಂಡರು. ಡಾ.ಲತಾ ಆರ್.ಕುಲಕರ್ಣಿ ಮಾತನಾಡಿ, ಹಣ್ಣುಗಳ ಮೌಲ್ಯವರ್ಧನೆ ಬಗ್ಗೆ ತಿಳಿಸಿಕೊಂಡರು. ಕೃಷಿ ಪರಿಕರಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ಕೃಷಿ ಇಲಾಖೆ ಆತ್ಮ ಯೋಜನೆ ಉಪ ಯೋಜನಾ ಅಧಿಕಾರಿ ಕಿರಣ್, ರಾಜಶೇಖರ್, ವಿಜ್ಞಾನಿ ವಿಕಾಸ್, ಯೋಜನಾ ಸಹಾಯಕ ಶ್ಯಾಮಸುಂದರ್ ಮತ್ತು ರಂಜಿತ್ ಹಾಗು ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT