ಅಂಕಾಲಮ್ಮದೇವಿ ಜಾತ್ರಾ ಮಹೋತ್ಸವ

ಶುಕ್ರವಾರ, ಮಾರ್ಚ್ 22, 2019
28 °C

ಅಂಕಾಲಮ್ಮದೇವಿ ಜಾತ್ರಾ ಮಹೋತ್ಸವ

Published:
Updated:
Prajavani

ಮಾಗಡಿ: ಪಟ್ಟಣದ ಅಗ್ನಿವಂಶ ಕ್ಷತ್ರೀಯ ತಿಗಳ ಸಮುದಾಯದ ಕುಲದೇವತೆ ಅಂಕಾಲಮ್ಮದೇವಿ ಜಾತ್ರಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ಬುಧವಾರ ರಾತ್ರಿ ನಡೆಯಿತು.

ಹೊಸಪೇಟೆ, ಹೊಂಬಾಳಮ್ಮನ ಪೇಟೆಯಿಂದ ತಿಗಳ ಸಮುದಾಯದ ಮಹಿಳೆಯರು ಹೂವು ಹೊಂಬಾಳೆ ಹಸಿ ತಂಬಿಟ್ಟಿನ ಆರತಿ ಮೆರವಣಿಗೆ ನಡೆಸಿದರು. ಉತ್ಸವ ಮೂರ್ತಿಯನ್ನು ಮಂಗಳವಾದ್ಯದೊಂದಿಗೆ ಮುಖ್ಯಬೀದಿಗಳಲ್ಲಿ ಮೆರವಣಿಗೆ ನಡೆಸಿ, ಮೂಲಸನ್ನಿಧಿಗೆ ಕರೆತರಲಾಯಿತು.

ತಿಗಳ ಸಮುದಾಯದ ಯಜಮಾನ ನರಸಿಂಹಮೂರ್ತಿ, ಯಜಮಾನ ನಾರಾಯಣಪ್ಪ, ಅಂಕಾಲಮ್ಮ ದೇವಾಲಯ ಅಭಿವೃದ್ಧಿ ಟ್ರಸ್ಟಿನ ಅಧ್ಯಕ್ಷ ಹೊಂಬಾಳಮ್ಮನಪೇಟೆ ಶ್ರೀನಿವಾಸ್‌ ಮಾತನಾಡಿದರು.

ಟ್ರಸ್ಟಿನ ಪದಾಧಿಕಾರಿಗಳಾದ ಪರಮಶಿವಯ್ಯ, ಸಿದ್ದೇಗೌಡ, ರತ್ನಮ್ಮ, ರೇಣುಕಪ್ಪ, ವಿಜಯಕುಮಾರ್‌, ಗುರುಸಿದ್ದಪ್ಪ, ಪೇಪರ್‌ ಕುಮಾರ, ಟೈಲರ್‌ ಮಂಜುನಾಥ, ಅಂಗಡಿ ಮಂಜುನಾಥ್‌, ಶಿವರಾಜ್‌, ಟೈಲರ್‌ ನರಸಿಂಹಮೂರ್ತಿ, ರಂಗನಾಥ ಪಾಟೀಲ್‌, ಪುರಸಭೆ ಅಧ್ಯಕ್ಷ ಎಚ್‌.ಆರ್‌.ಮಂಜುನಾಥ, ಸದಸ್ಯ ರಘು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು. ಸಾಮೂಹಿಕ ಅನ್ನದಾನ ನಡೆಯಿತು.

ಹಿರಿಯ ಜನಪದ ಕಲಾವಿದರಾದ ಗಂಗಮ್ಮ, ಜಯಮ್ಮ ತಂಡದವರು ಜನಪದ ಕಥನಕಾವ್ಯ ಹಾಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !