ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ವಾತಾವರಣಕ್ಕಾಗಿ ಮರ ಬೆಳೆಸಲು ಮನವಿ

Last Updated 18 ಜೂನ್ 2019, 14:41 IST
ಅಕ್ಷರ ಗಾತ್ರ

ಕನಕಪುರ: ‘ಪರಿಶುದ್ಧ ಗಾಳಿ ಮತ್ತು ಉತ್ತಮ ವಾತಾವರಣಕ್ಕಾಗಿ ಸಸಿ ನೆಡಲಾಗಿದೆ. ಸ್ಥಳೀಯ ನಿವಾಸಿಗಳು ಅದರ ಪೋಷಿಸಿ ಬೆಳೆಸಬೇಕು’ ಎಂದು ನಗರಸಭೆ ಸದಸ್ಯ ಭೈರವೇಶ್ವರ ರಾಜು ಮನವಿ ಮಾಡಿದರು.

ನಗರದ 18ನೇ ವಾರ್ಡ್‌ ಬಸವೇಶ್ವರ ನಗರದ ರಸ್ತೆಗಳಲ್ಲಿ ಮಂಗಳವಾರ ನಗರಸಭೆ ಮತ್ತು ಪ್ರಾದೇಶಿಕ ಅರಣ್ಯ ಇಲಾಖೆ ಸಹಯೋಗದಲ್ಲಿ ಪರಿಸರ ದಿನಾಚರಣೆ ಹಾಗೂ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಗರಸಭೆ ವ್ಯಾಪ್ತಿಯಲ್ಲಿ ಬಸವೇಶ್ವರ ನಗರವನ್ನು ಮಾದರಿ ಪ್ರದೇಶವನ್ನಾಗಿ ತೆಗೆದುಕೊಂಡಿದ್ದು ಇಲ್ಲಿ ಕಾಂಕ್ರೀಟ್‌‌ ರಸ್ತೆ, ಒಳಚರಂಡಿ ಸೇರಿದಂತೆ ರಸ್ತೆಯ ಎರಡೂ ಬದಿಯಲ್ಲಿಪ್ರಾಯೋಗಿಕವಾಗಿ ಸಸಿ ನೆಡಲಾಗಿದೆ. ನಗರಸಭೆಯವರು ಸಸಿಗಳಿಗೆ ನೀರು ಪೂರೈಕೆ ಮಾಡುವುದಾಗಿ ತಿಳಿಸಿದ್ದಾರೆ. ಅರಣ್ಯ ಇಲಾಖೆಯವರು ಉಚಿತವಾಗಿ ಸಸಿ ನೀಡಿ, ಅವುಗಳಿಗೆ ಬೇಲಿ ನಿರ್ಮಿಸುವ ಕಾರ್ಯ ಮಾಡಿದ್ದಾರೆ’ ಎಂದು ತಿಳಿಸಿದರು.

‘ನಮ್ಮ ಬಡಾವಣೆಯ ಕಾಂಗ್ರೆಸ್‌ ಯುವ ಮುಖಂಡರು ಸಸಿ ಬೆಳೆಸುವ ಜವಾಬ್ದಾರಿ ವಹಿಸಿಕೊಂಡಿದ್ದು, ಈಗಾಗಲೇ ಒಂದು ಸಾವಿರ ಸಸಿಗಳನ್ನು ಬಡಾವಣೆಯ ಎಲ್ಲ ರಸ್ತೆಗಳಲ್ಲಿ ನೆಟ್ಟಿದ್ದೇವೆ. ಉತ್ತಮ ವಾತಾವರಣ ಹಾಗೂ ನೆರಳಿನ ಅನುಕೂಲಕ್ಕಾಗಿ ನಾವು ನಡೆಸುತ್ತಿರುವ ಈ ವನಸಿರಿ ಕಾರ್ಯಕ್ರಮಕ್ಕೆ ಬಡಾವಣೆ ನಿವಾಸಿಗಳು ಕೈ ಜೋಡಿಸಬೇಕು. ತಮ್ಮ ಮನೆಗಳ ಮುಂದೆ ನೆಟ್ಟಿರುವ ಸಸಿಗಳನ್ನು ಪೋಷಿಸಿ, ಬೆಳೆಸಬೇಕು’ ಎಂದು ಮನವಿ ಮಾಡಿದರು.

‘ಬಸವೇಶ್ವರ ನಗರದಲ್ಲಿ ಪ್ರಾಯೋಗಿಕವಾಗಿ ನಡೆಸುತ್ತಿರುವ ಈ ವನಸಿರಿ ಕಾರ್ಯಕ್ರಮ ಯಶಸ್ವಿಯಾಗಿದೆ. ನಗರಸಭೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಶೀಘ್ರದಲ್ಲಿ ನಡೆಸಲಾಗುವುದು’ ಎಂದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೀಮಾ, ಉಪ ವಲಯ ಅರಣ್ಯಾಧಿಕಾರಿಗಳು, ಅರಣ್ಯ ರಕ್ಷಕರು, ಅರಣ್ಯ ಸಿಬ್ಬಂದಿ, ನಗರಸಭೆ ಪರಿಸರ ಎಂಜಿನಿಯರ್‌ ಪಾರ್ವತಿ, ಕಿರಿಯ ಅಧಿಕಾರಿಗಳು, ಸಿಬ್ಬಂದಿ, ಪೌರ ಕಾರ್ಮಿಕರು, ಕಾಂಗ್ರೆಸ್‌ ಮುಖಂಡರಾದ ಗರಳಾಪುರ ರಾಜು, ಬಸ್‌ ಸಿದ್ದರಾಜು, ಮುನಿಮಾದು, ಸೋಮಣ್ಣ, ಗಡ್ಡದ ಲಿಂಗಣ್ಣ, ಶ್ರೀನಿವಾಸ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT