ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಿಗ ಕುಟುಂಬಕ್ಕೆ ನೆರವು

Last Updated 4 ಜುಲೈ 2021, 8:31 IST
ಅಕ್ಷರ ಗಾತ್ರ

ಮಾಗಡಿ: ತಿರುಮಲೆ ಕೊಳಚೆ ನಿರ್ಮೂಲನಾ ಮಂಡಳಿ ಮನೆಯಲ್ಲಿ ತಾತ್ಕಾಲಿಕ ವಸತಿಯಲ್ಲಿದ್ದ ಸೋಲಿಗ ಮಂಜುನಾಥ್ ಕುಟುಂಬದವರಿಗೆ ದಾನಿಗಳು ಕೊಟ್ಟಿದ್ದ ವಸ್ತುಗಳನ್ನು ಕಳವು ಮಾಡಿರುವ ಸುದ್ದಿ ತಿಳಿದ ಕೂಡಲೇ ಜ್ಯೋತಿಪಾಳ್ಯದ ಕುಂಬಾರರ ಸಂಘದಿಂದ ನೆರವು
ನೀಡಲಾಯಿತು.

ಸಂಘದ ನಿರ್ದೇಶಕರಾದ ವೆಂಕಟರಂಗಯ್ಯ, ರಾಜೇಶ್, ಕೃಷ್ಣಮೂರ್ತಿ ನಾರಾಯಣ್ ಆಗಮಿಸಿ ಕುಡಿಯುವ ನೀರು ಸಂಗ್ರಹಿಸಿಟ್ಟು ಕೊಳ್ಳಲು ಮಣ್ಣಿನ ಗುಡಾಣ, ಪಾತ್ರೆಗಳು ಮತ್ತು ನಗದನ್ನು ಕುಟುಂಬಕ್ಕೆ ನೀಡಿ ಮಾನವೀಯತೆ ಮೆರೆದರು.

ಕುಂಬಾರರ ಸಂಘದ ನಿರ್ದೇಶಕ ವೆಂಟಕರಂಗಯ್ಯ ಮಾತನಾಡಿ, ದಿಕ್ಕಿಲ್ಲದ ಸೋಲಿಗ ಕುಟುಂಬಕ್ಕೆ ದಾನಿಗಳು ಉದಾರವಾಗಿ ನೀಡಿದ್ದ ದವಸಧಾನ್ಯ, ಬಟ್ಟೆ, ಪಾತ್ರೆ, ಹೊದಿಕೆ ದೋಚಿರುವುದು ನಾಚಿಕೆಗೇಡಿನ ಸಂಗತಿ. ದಿಕ್ಕಿಲ್ಲದವರಿಗೆ ನೆರವು ನೀಡುವುದು ಮನುಷ್ಯರ ಮಹತ್ವದ ಉದ್ದೇಶವಾಗಬೇಕು ಎಂದರು.

‘ಮಣ್ಣನ್ನು ನಂಬಿ ಬದುಕುತ್ತಿದ್ದ ಕುಂಬಾರ ಸಮುದಾಯದವರ ನೆರವಿಗೆ ಯಾರೂ ಮುಂದಾಗುತ್ತಿಲ್ಲ. ಹುಟ್ಟಿನಿಂದ ಚಟ್ಟದವರೆಗೆ ಮಣ್ಣಿನಿಂದ ಕುಂಬಾರರು ತಯಾರಿಸಿದ್ದ ಮಡಿಕೆ ಕುಡಿಕೆಗಳು ಅಗತ್ಯವಾಗಿ ಬೇಕಾಗಿವೆ. ನಾವೂ ಸಿರಿವಂತರಲ್ಲ. ಆದರೆ, ದಿಕ್ಕಿಲ್ಲದವರನ್ನು ಕಂಡಾಗ ನಾವು ತಿನ್ನುವ ಅನ್ನದಲ್ಲಿ ಒಂದು ತುತ್ತು ನೀಡುವ ಹಂಬಲ ನಮ್ಮದು’ ಎಂದು ನಿರ್ದೇಶಕ ರಾಜೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT