ಬುಧವಾರ, ಜನವರಿ 29, 2020
23 °C

ಶಬರಿಮಲೆ ಸ್ವಾಮಿ ಅಯ್ಯಪ್ಪ ಚರಿತ್ರೆ ನಾಟಕ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಚಾಮುಂಡೇಶ್ವರಿ ಸಾಂಸ್ಕೃತಿಕ ಕಲಾ ಟ್ರಸ್ಟಿನ ಉದ್ಘಾಟನೆ ಅಂಗವಾಗಿ 'ಶಬರಿಮಲೆ ಸ್ವಾಮಿ ಅಯ್ಯಪ್ಪನ ಚರಿತ್ರೆ' ಭಕ್ತಿ ಪ್ರಧಾನ ನಾಟಕ ಪ್ರದರ್ಶನ ನಡೆಯಿತು.

ಕಲಾಪೋಷಕ ವೆಂಕಟೇಶ್ ವಿ. ಗೌಡ, ಆರ್.ಎಸ್. ಮಹದೇವು, ಎಸ್.ಬಿ. ಲಿಂಗೇಗೌಡ ಅವರಿಗೆ ಬೆಳ್ಳಿ ಕಿರೀಟವನ್ನು ತೊಡಿಸಿ ಸನ್ಮಾನಿಸಲಾಯಿತು.

ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಎನ್. ರಾಮು, ರಂಗಭೂಮಿ ಕಲಾವಿದರ ಒಕ್ಕೂಟದ ಅಧ್ಯಕ್ಷ ಬೈರೇಗೌಡ, ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಕೆ. ರವಿ, ಮುಖಂಡ ಧನಂಜಯ್, ಚಾಮುಂಡೇಶ್ವರಿ ಸಾಂಸ್ಕೃತಿಕ ಕಲಾ ಟ್ರಸ್ಟಿನ ಅಧ್ಯಕ್ಷ ಗೋಪಾಲ್, ಉಪಾಧ್ಯಕ್ಷ ಧನರಾಜ್, ಕಲಾವಿದರಾದ ಗೋಪಾಲ್, ವಿಜಯ್ ಕುಮಾರ್, ರೇಣುಕಾಪ್ರಸಾದ್, ಪಟೇಲ್ ವೆಂಕಟೇಶ್, ಲಿಂಗೇಗೌಡ, ರಂಗ ನಿರ್ದೇಶಕರಾದ ಶಿವಾನಂದಮೂರ್ತಿ, ಕೃಷ್ಣರಾಜು, ಸಿದ್ದಪ್ಪ ಇದ್ದರು.

ಪ್ರತಿಕ್ರಿಯಿಸಿ (+)