ಬ್ಯಾಗ್‌, ನೋಟ್‌ ಪುಸ್ತಕ ವಿತರಣೆ

ಭಾನುವಾರ, ಜೂಲೈ 21, 2019
28 °C

ಬ್ಯಾಗ್‌, ನೋಟ್‌ ಪುಸ್ತಕ ವಿತರಣೆ

Published:
Updated:
Prajavani

ಕುದೂರು(ಮಾಗಡಿ): ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಡವರ ಮಕ್ಕಳಿಗೆ ನೆರವು ನೀಡುವುದರಿಂದ ಮಾನಸಿಕ ನೆಮ್ಮದಿಯ ಜತೆಗೆ, ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಅನುಕೂಲವಾಗಲಿದೆ ಯುವ ಮುಖಂಡ ಲೋಕೇಶ್‌ ತಿಳಿಸಿದರು.

ಗ್ರಾಮದ ಮಹಾತ್ಮನಗರದ ನಮ್ಮೂರ ಕಿರಿಯ ಶಾಲೆಯ ಮಕ್ಕಳಿಗೆ ಬುಧವಾರ ಉಚಿತ ಬ್ಯಾಗ್‌ ಮತ್ತು ನೋಟ್‌ ಪುಸ್ತಕ ವಿತರಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲೆ ಮಾಡಿದವರಿಗೆ ಮಾತ್ರ ಸರ್ಕಾರಿ ಸವಲತ್ತುಗಳು ಸಿಗುವಂತಾಗಬೇಕು ಎಂದು ತಿಳಿಸಿದರು.

ಪಾಳೇಗಾರ ಬಣ್ಣದ ಟಿ.ಹನುಮಂತರಾಯಪ್ಪ ಮಾತನಾಡಿ, ಯುವಕರು ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಮೆಚ್ಚುವ ಸಂಗತಿಯಾಗಿದೆ ಎಂದರು.

ಮುಖ್ಯಶಿಕ್ಷಕ ಮಾಯಣ್ಣ, ಮುಖಂಡ ಕೆ.ಬಿ.ಚಂದ್ರಶೇಖರ್, ಕುಮಾರ್ , ಬಾಬು, ದಯಾನಂದ , ಜಗದೀಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !