ಹಾರೋಹಳ್ಳಿ: ಯುಗಾದಿ ಹಬ್ಬದ ಮುನ್ನವೇ ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮುಲ್) ರೈತರಿಗೆ ಸಿಹಿ ಸುದ್ದಿ ನೀಡಿದೆ. ಕಳೆದ ಎಂಟು ತಿಂಗಳ ಹಿಂದೆ ₹14.50 ಕೋಟಿ ನಷ್ಟದಲ್ಲಿದ್ದ ಸಂಸ್ಥೆ ಈಗ ₹60 ಕೋಟಿ ಲಾಭ ಗಳಿಸುವ ಮೂಲಕ ಆರ್ಥಿಕ ಚೇತರಿಕೆ ಕಂಡಿದೆ. ಈ ಲಾಭವನ್ನು ನೇರವಾಗಿ ಅನ್ನದಾತನಿಗೆ ತಲುಪಿಸಲು ಬಮುಲ್ ಮುಂದಾಗಿದೆ.

ಆರ್ಥಿಕ ಪ್ರಗತಿಯತ್ತ ಬಮುಲ್: ಕಳೆದ ಸಾಲಿನಲ್ಲಿ ₹2,900 ಕೋಟಿ ವಹಿವಾಟು ನಡೆಸಿದ್ದ ಬಮುಲ್, ಪ್ರಸಕ್ತ ಸಾಲಿನಲ್ಲಿ ಮಾರ್ಚ್ ಅಂತ್ಯದ ವೇಳೆಗೆ ₹3,400 ಕೋಟಿ ವಹಿವಾಟು ದಾಖಲಿಸುವ ಮೂಲಕ ತನ್ನ ಆರ್ಥಿಕ ಶಿಸ್ತನ್ನು ಪ್ರದರ್ಶಿಸಿದೆ. ಸಿಬ್ಬಂದಿ ಮತ್ತು ಆಡಳಿತಾತ್ಮಕ ವೆಚ್ಚ ಹೆಚ್ಚಾಗಿದ್ದರೂ, ಮಾರುಕಟ್ಟೆ ಸೋರಿಕೆ ತಡೆಗಟ್ಟುವುದು ಮತ್ತು ಸಾಗಣೆ ವೆಚ್ಚವನ್ನು ವೈಜ್ಞಾನಿಕವಾಗಿ ಕಡಿತಗೊಳಿಸುವ ಮೂಲಕ ಸಂಸ್ಥೆಯನ್ನು ಲಾಭದತ್ತ ಕೊಂಡೊಯ್ಯಲಾಗಿದೆ.

ಮೌಲ್ಯವರ್ಧಿತ ಉತ್ಪನ್ನಗಳಿಗೆ ಒತ್ತು: ಮಾರುಕಟ್ಟೆಯಲ್ಲಿ ನಂದಿನಿ ಹಾಲು ಅತ್ಯಂತ ಕಡಿಮೆ ದರದಲ್ಲಿ ಸಿಗುತ್ತಿರುವುದು ಗ್ರಾಹಕರಿಗೆ ವರವಾಗಿದ್ದರೂ ಒಕ್ಕೂಟಗಳಿಗೆ ಇದು ಆರ್ಥಿಕ ಸವಾಲಾಗಿತ್ತು. ಈ ಸವಾಲನ್ನು ಎದುರಿಸಲು ಬಮುಲ್ ಮೌಲ್ಯವರ್ಧಿತ ಉತ್ಪನ್ನಗಳತ್ತ ಗಮನ ಹರಿಸಿದೆ. ಚೀಸ್, ಪನೀರ್ ಮತ್ತು ವೇ ಪೌಡರ್ ಉತ್ಪಾದನೆಯನ್ನು ಹೆಚ್ಚಿಸಲಾಗಿದ್ದು, ಕನಕಪುರದ ಮೆಗಾ ಡೇರಿಯಲ್ಲಿ ಸಂಸ್ಕರಣಾ ಸಾಮರ್ಥ್ಯವನ್ನು ಗರಿಷ್ಠ ಮಟ್ಟಕ್ಕೆ ಬಳಸಿಕೊಳ್ಳಲಾಗುತ್ತಿದೆ.

ಸಂಘಗಳು ಮತ್ತು ಗುತ್ತಿಗೆ ನೌಕರರಿಗೂ ಪ್ರಯೋಜನ: ಬಮುಲ್ ವ್ಯಾಪ್ತಿಯಲ್ಲಿನ ಪ್ರಾಥಮಿಕ ಹಾಲು ಉತ್ಪಾದಕರ ಸಂಘಗಳು ಹಾಗೂ ಗುತ್ತಿಗೆ ನೌಕರರಿಗೂ ಆದಾಯದ ಪಾಲು ಹಂಚುವ ನಿರ್ಧಾರ ಕೈಗೊಳ್ಳಲಾಗಿದೆ. 2,300 ಪ್ರಾಥಮಿಕ ಹಾಲು ಉತ್ಪಾದಕರ ಸಂಘಗಳ ನಿರ್ವಹಣೆಗೆ ಪ್ರತಿ ಸಂಘಕ್ಕೆ ₹15,000 ಪ್ರೋತ್ಸಾಹ ಧನ ಘೋಷಣೆ ಮಾಡಲಾಗಿದೆ. ಸಂಸ್ಥೆಯ ಬೆನ್ನೆಲುಬಾಗಿರುವ 1,800 ಗುತ್ತಿಗೆ ಕಾರ್ಮಿಕರಿಗೆ ತಲಾ ₹5000 ಬೋನಸ್ ನೀಡುವ ಮೂಲಕ ಕಾರ್ಮಿಕ ಸ್ನೇಹಿ ನಿಲುವು ಪ್ರದರ್ಶನ ಮಾಡಲಾಗಿದೆ. ಬಮುಲ್ ಉತ್ಪನ್ನಗಳ ರಾಯಭಾರಿಯಾಗಿ ಹಿರಿಯ ನಟಿ ಸುಧಾರಾಣಿ ಅವರನ್ನು ಆಯ್ಕೆ ಮಾಡಲಾಗಿದೆ.

ರೈತಪರ ಚಿಂತನೆಯ ಡಿ.ಕೆ.ಸುರೇಶ್ ನೇತೃತ್ವ: ಕೆಲವು ತಿಂಗಳ ಹಿಂದೆ ಬಮುಲ್ ಅಧ್ಯಕ್ಷರಾಗಿ ಆಯ್ಕೆಯಾದ ಡಿ.ಕೆ.ಸುರೇಶ್, ಜಡ್ಡುಗಟ್ಟಿದ್ದ ವ್ಯವಸ್ಥೆಗೆ ಚುರುಕು ಮುಟ್ಟಿಸಿ ಒಕ್ಕೂಟವನ್ನು ನಷ್ಟದ ಹಾದಿಯಿಂದ ಲಾಭದತ್ತ ಕೊಂಡೊಯ್ಯುವಲ್ಲಿ ಶ್ರಮಿಸುತ್ತಿದ್ದಾರೆ.

ಈಗಾಗಲೇ ರೈತಪರ ಚಿಂತನೆಗಳಿಗೆ ಹೆಸರಾದ ಅವರು ಈಚೆಗೆ ಹಾಲು ಉತ್ಪಾದಕ ಸಹಕಾರ ಸಂಘ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ‘ಹಾಲು ಮತ್ತು ರೇಷ್ಮೆ ಮಾತ್ರ ಕೃಷಿ ಕ್ಷೇತ್ರದಲ್ಲಿ ರೈತರಿಗೆ ನಿಯಮಿತವಾಗಿ ಆದಾಯ ತಂದು ಕೊಡುತ್ತಿದೆ. ಲಕ್ಷಾಂತರ ಮಂದಿ ಅವಲಂಬಿರುವ ಕ್ಷೀರ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆ ತರುವ ಕೆಲಸ ಮಾಡುತ್ತಿದ್ದೇನೆ. ಮುಂದೆ ಸರ್ಕಾರಿ ಮತ್ತು ಖಾಸಗಿ ವಲಯದಲ್ಲೂ ಕೆಲಸ ಸಿಗಲ್ಲ. ದುಡಿಯುವ ಕೈಗಳಿಗೆ ಮಾತ್ರ ಆದಾಯ ಸಿಗುತ್ತದೆ‘ ಎಂದು ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲೇ ಹಾಲು ಉತ್ಪಾದಕರಿಗೆ 5 ಪ್ರೋತ್ಸಾಹ ಧನ ನೀಡುತ್ತಿರುವ ಏಕೈಕ ರಾಜ್ಯ ಕರ್ನಾಟಕ. ಬಮುಲ್ ಈಗ ತನ್ನ ಲಾಭಾಂಶ ಹಂಚುವ ಮೂಲಕ ಈ ಸಾಧನೆಗೆ ಹೊಸ ಮೆರುಗು ನೀಡಿದೆ.
- ಎಚ್.ಎಸ್.ಹರೀಶ್ ಕುಮಾರ್, ಬಮುಲ್ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.