ಬರಡನಹಳ್ಳಿಯಲ್ಲಿ ಬಸವೇಶ್ವರಸ್ವಾಮಿ ಅಗ್ನಿಕೊಂಡೋತ್ಸವ

ಬುಧವಾರ, ಏಪ್ರಿಲ್ 24, 2019
23 °C

ಬರಡನಹಳ್ಳಿಯಲ್ಲಿ ಬಸವೇಶ್ವರಸ್ವಾಮಿ ಅಗ್ನಿಕೊಂಡೋತ್ಸವ

Published:
Updated:
Prajavani

ಕನಕಪುರ: ಬರಡನಹಳ್ಳಿ ಗ್ರಾಮದಲ್ಲಿ ಬಸವೇಶ್ವರಸ್ವಾಮಿ ಅಗ್ನಿಕೊಂಡೋತ್ಸವ ಮಂಗಳವಾರ ಬೆಳಿಗ್ಗೆ ವಿಜೃಂಭಣೆಯಿಂದ ಭಕ್ತರ ಸಮ್ಮುಖದಲ್ಲಿ ನಡೆಯಿತು.

ಅಗ್ನಿಕೊಂಡೋತ್ಸವ ಪ್ರಯುಕ್ತ ಗ್ರಾಮದಲ್ಲಿ ಸೋಮವಾರ ರಾತ್ರಿ ಎಳವಾರ ಕಾರ್ಯಕ್ರಮ ನಡೆಯಿತು. ಗ್ರಾಮದ ಎಲ್ಲ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಬೆಳಿಗ್ಗೆ ಅಗ್ನಿಕೊಂಡಕ್ಕೆ ಸೌದೆ ಹಾಕಲಾಯಿತು.

ಮಂಗಳವಾರ ಬೆಳಿಗ್ಗೆ ಗ್ರಾಮಸ್ಥರು ಮೆರವಣಿಗೆಯಲ್ಲಿ ಚಿಕ್ಕ ಹೊಳೆಗೆ ತೆರಳಿ ಗಂಗಾಪೂಜೆ ನೆರವೇರಿಸಿ ಅಲ್ಲಿಂದ ದೇವರನ್ನು ಬಸವೇಶ್ವರ ದೇವಾಲಯಕ್ಕೆ ಕರೆತಂದರು. ದೇವಾಲಯದ ಸುತ್ತಲೂ ಮೂರು ಸುತ್ತು ಪ್ರದಕ್ಷಿಣೆ ಮಾಡಿಸಲಾಯಿತು. ದೇವಸ್ಥಾನದ ಅರ್ಚಕರಾದ ವೀರಭದ್ರ ಅವರು ಬಸವೇಶ್ವರಸ್ವಾಮಿ ಹೊತ್ತು ಅಗ್ನಿಕೊಂಡ ಹಾಯ್ದರು.

ಸಾವಿರಾರು ಸಂಖ್ಯೆಯಲ್ಲಿ ನೆರದಿದ್ದ ಜನರು ಅಗ್ನಿಕೊಂಡ ಪ್ರವೇಶ ಕಣ್ಮುಂಬಿಕೊಂಡರು. ದೇಗುಲ ಮಠದ ಹಿರಿಯ ಶ್ರೀಗಳಾದ ಡಾ.ಮುಮ್ಮಡಿ ನಿರ್ವಾಣಸ್ವಾಮಿ ಜಾತ್ರಾ ಮಹೋತ್ಸವದ ನೇತೃತ್ವ ವಹಿಸಿದ್ದರು. ಅರ್ಚಕರಾದ ಪರಶಿವಯ್ಯ ಕುಟುಂಬದವರು ಪೂಜಾ ಕಾರ್ಯದ ಜವಾಬ್ದಾರಿ ನಿರ್ವಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !