ಜಿಬಿಡಿಎ ನಿರ್ದೇಶಕಗೆ ಮುತ್ತಿಗೆ
ಉಪನಗರ ಯೋಜನೆ ವಿರೋಧಿಸಿ ಅಹೋರಾತ್ರಿ ಹೋರಾಟ ನಡೆಸುತ್ತಿರುವ ರೈತರು ಭೈರಮಂಗಲಕ್ಕೆ ಭೇಟಿ ನೀಡಿದ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ನರಸಿಂಹಯ್ಯ ಅವರಿಗೆ ಮುತ್ತಿಗೆ ಹಾಕಿದರು. ನಮಗೆ ಭೂ ಸ್ವಾಧೀನ ಬೇಡವೆಂದರೂ ಸ್ವಾಧೀನ ಮಾಡುತ್ತಿದ್ದೀರಿ. ಯಾವ ನೈತಿಕತೆ ಇಟ್ಟುಕೊಂಡು ನೀವು ಇಲ್ಲಿಗೆ ಬಂದಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ನಿಮಗೆ ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಇದ್ದರೆ ನಮ್ಮ ಹೋರಾಟಕ್ಕೆ ಕೈ ಜೋಡಿಸಿ ಎಂದು ಸವಾಲು ಹಾಕಿದರು.