ಮಂಗಳವಾರ, ಅಕ್ಟೋಬರ್ 15, 2019
29 °C

ಆನಂದ್‌ಗೆ ಭಗವಾನ್ ಬುದ್ಧ ನ್ಯಾಶನಲ್ ಅವಾರ್ಡ್

Published:
Updated:
Prajavani

ಚನ್ನಪಟ್ಟಣ: ಇಲ್ಲಿನ ಕರಾಟೆ ಶಿಕ್ಷಕ ಸಿ. ಆನಂದ್ ಅವರಿಗೆ 2019ನೇ ಸಾಲಿನ ‘ಭಗವಾನ್ ಬುದ್ಧ ನ್ಯಾಶನಲ್ ಅವಾರ್ಡ್’ ಪ್ರಶಸ್ತಿ ದೊರೆತಿದೆ.

ಕರ್ನಾಟಕ ರಾಜ್ಯ ಬುದ್ಧ ನ್ಯಾಶನಲ್ ಎಜುಕೇಷನ್ ಅಂಡ್ ಕಲ್ಚರಲ್ ಅಕಾಡೆಮಿಯು ಪ್ರತಿವರ್ಷ ನೀಡುವ ಪ್ರತಿಷ್ಟಿತ ರಾಷ್ಟ್ರೀಯ ಅವಾರ್ಡ್ ಇದಾಗಿದ್ದು, ಕರಾಟೆಯಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿರುವ ಆನಂದ್ ಅವರ ಸೇವೆ ಗುರುತಿಸಿ ಈ ಪ್ರಶಸ್ತಿ ನೀಡಲಾಗಿದ್ದು, ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಎಚ್.ಬಿ.ಸಂಪತ್ತು ತಿಳಿಸಿದ್ದಾರೆ.

ಆನಂದ್ ಅವರು ತಾಲ್ಲೂಕಿನ ಹಲವು ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಕರಾಟೆ ತರಬೇತಿ ನೀಡುವುದರ ಜೊತೆಗೆ, ಬಡ ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಹಾಯ ನೀಡಿ ಹಲವು ಪ್ರಶಸ್ತಿ ದೊರೆಯಲು ಶ್ರಮಿಸಿದ್ದಾರೆ.

ಇವರ ಮಾರ್ಗದರ್ಶನದಲ್ಲಿ ಹಲವು ವಿದ್ಯಾರ್ಥಿಗಳು ಕರ್ನಾಟಕ, ಆಂದ್ರಪ್ರದೇಶ, ತಮಿಳುನಾಡು, ಅಸ್ಸಾಂ, ಮಣಿಪುರ, ಮಹಾರಾಷ್ಟ್ರ, ಕೇರಳ, ತೆಲಂಗಾಣ, ಬಿಹಾರ, ಒರಿಸ್ಸಾ, ಛತ್ತಿಸ್‌ಗಡ, ಪಂಜಾಬ್, ಉತ್ತರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.

Post Comments (+)