ಬಿಡದಿ (ರಾಮನಗರ): ತಾಲ್ಲೂಕಿನ ಭೈರಮಂಗಲ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್–ಬಿಜೆಪಿ ಬೆಂಬಲಿತ ಬಿ. ನಂಜಪ್ಪ ಹಾಗೂ ಉಪಾಧ್ಯಕ್ಷರಾಗಿ ಕೃಷ್ಣಪ್ಪ ಆಯ್ಕೆಯಾಗಿದ್ದಾರೆ.

ಸಂಘದ ಕಚೇರಿ ಆವರಣದಲ್ಲಿ ಗುರುವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಸಾಮಾನ್ಯ ಕ್ಷೇತ್ರದ ನಿರ್ದೇಶಕರಾದ ನಂಜಪ್ಪ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಕೃಷ್ಣಪ್ಪ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಬೇರಾರು ನಾಮಪತ್ರ ಸಲ್ಲಿಸದಿದ್ದರಿಂದ ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಹಕಾರ ಇಲಾಖೆಯ ಕೆ.ಟಿ. ಉಮೇಶ್ ಘೋಷಿಸಿದರು.

ಸಂಘದ ಕಾರ್ಯದರ್ಶಿ ಮನೋಜ್ಗೌಡ ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಸಂಘದ ನಿರ್ದೇಶಕರ ಸ್ಥಾನಕ್ಕೆ ಡಿ. 18ರಂದು ನಡೆದಿದ್ದ ಚುನಾವಣೆಯಲ್ಲಿ 8 ಜೆಡಿಎಸ್-ಬಿಜೆಪಿ ಹಾಗೂ ಮೂವರು ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಆಯ್ಕೆಯಾಗಿದ್ದರು.

ನೂತನ ಅಧ್ಯಕ್ಷರನ್ನು ನಿರ್ದೇಶಕರಾದ ಪ್ರಕಾಶ್, ರಾಘವೇಂದ್ರ, ಕಾಂತರಾಜು, ಕಮಲಮ್ಮ, ಬಿ.ಟಿ. ನಿತ್ಯಾನಂದ, ಮಂಗಳ ಕೆ., ಶಶಿಶೇಖರ್, ನರಸಿಂಹಯ್ಯ, ಸೋಮಶೇಖರ್, ಮುಖಂಡರಾದ ಬಿ.ಎಲ್. ಮಂಜುನಾಥ್, ಶಿವಣ್ಣ, ಬಿ.ಸಿ. ಹೇಮಂತ್ ಕುಮಾರ್, ಕುಮಾರಸ್ವಾಮಿ, ನಾಗರಾಜು, ಆರ್. ತಿಮ್ಮೇಗೌಡ, ವೆಂಕಟರಮಣ ಸ್ವಾಮಿ, ಹಾಲು ಪರೀಕ್ಷಕ ಚನ್ನಪ್ಪ, ಸಹಾಯಕ ರಾಮಕೃಷ್ಣಯ್ಯ ಹಾಗೂ ಇತರರು ಅಭಿನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.