ಗುರುವಾರ , ಮೇ 26, 2022
32 °C

ಭಾರತಿ ಸೊಸೈಟಿ ಸಭೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ದಿ ಭಾರತಿ ಕೋ ಅಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆಯು ಇದೇ 7ರಂದು ಬ್ಯಾಂಕಿನ ಕಚೇರಿಯಲ್ಲಿ ನಡೆಯಲಿದೆ ಎಂದು ಸೊಸೈಟಿ ಅಧ್ಯಕ್ಷ ಚಂದ್ರಯ್ಯ ತಿಳಿಸಿದರು.

‘ಸೊಸೈಟಿಯಲ್ಲಿ 4 ಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ. ಈ ವರ್ಷ
₹ 80.78 ಲಕ್ಷ ನಿವ್ವಳ ಲಾಭ ಬಂದಿದೆ. ಪ್ರತಿವರ್ಷ ಮಾಡಲಾಗುತ್ತಿರುವ ಖರ್ಚು, ಬಂದಿರುವ ಆದಾಯವನ್ನು ಎಲ್ಲವನ್ನು ಪಾರದರ್ಶಕವಾಗಿ ಸದಸ್ಯರಿಗೆ ತೋರಿಸುವ ಪ್ರಯತ್ನ ಮಾಡಲಾಗಿದೆ’ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಗೃಹ ಸಾಲ, ವೈಯಕ್ತಿಕ ಸಾಲ, ಸದಸ್ಯರು ಮೃತಪಟ್ಟರೆ ಮರಣೋತ್ತರ ಸಹಾಯಧನ ಹಾಗೂ ಒಡವೆ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯವನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. 4,623 ಸದಸ್ಯರಿಂದ ಒಟ್ಟು ₹ 12 ಕೋಟಿ ಠೇವಣಿ ಸಂಗ್ರಹ ಆಗಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.