ಬುಧವಾರ, ಆಗಸ್ಟ್ 21, 2019
25 °C

ಭೀಮನ ಅಮವಾಸ್ಯೆ ವಿಶೇಷ ಪೂಜೆ

Published:
Updated:
Prajavani

ಚನ್ನಪಟ್ಟಣ: ಇಲ್ಲಿನ ಹುಣಸನಹಳ್ಳಿ ಗ್ರಾಮದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ, ಗುರುವಾರ ಶಿಂಷಾನದಿ ದಡದಲ್ಲಿ ನೆಲೆಗೊಂಡಿರುವ ಶ್ರೀ ಬಿಸಿಲೇಶ್ವರಿ ಅಮ್ಮನವರಿಗೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು.

ಬೆಳಿಗ್ಗೆಯಿಂದಲೇ ಭಕ್ತರು ಪೂಜೆ ಸಲ್ಲಿಸಿದರು. ಗ್ರಾಮದ ಶ್ರೀ ಅನ್ನಪೂರ್ಣೇಶ್ವರಿ ಸೇವಾ ಟ್ರಸ್ಟ್ ಆಶ್ರಯದಲ್ಲಿ ಅನ್ನ ಸಂತರ್ಪಣೆ ಆಯೋಜಿಲಾಗಿತ್ತು. ಐದನೇ ವರ್ಷದ ಅನ್ನದಾಸೋಹ ನಡೆಸುತ್ತಿರುವ ಸೇವಾ ಟ್ರಸ್ಟ್, ಮುಂದಿನ ದಿನಗಳಲ್ಲಿ ಹಲವು ರೀತಿಯ ಸಮಾಜಮುಖಿ ಚಟುವಟಿಕೆ ಕೈಗೊಳ್ಳಲಿದೆ ಎಂದು ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದರು.

ಕೋಡಂಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಅಜಿತ್, ಆರೋಗ್ಯ ಇಲಾಖೆ ಸಿಬ್ಬಂದಿ, ಗ್ರಾಮ ಪಂಚಾಯಿತಿ ಪಿಡಿಒ ಶಿವಲಿಂಗಯ್ಯ, ಆರೋಗ್ಯ ಇಲಾಖೆಯ ಶ್ರೀಹರ್ಷ, ಅನುಸೂಯಮ್ಮ, ಪೊಲೀಸ್ ಸಿಬ್ಬಂದಿ ಹಾಗೂ ಟ್ರಸ್ಟ್ ಪದಾಧಿಕಾರಿಗಳು ಇದ್ದರು.

Post Comments (+)