ಬಿಡದಿ: ಬೆಂಗಳೂರಿಗೆ ಕೂಗಳತೆ ದೂರದಲ್ಲಿ ಬಿಡದಿ ಪಟ್ಟಣದ ಇದ್ದರೂ ಹತ್ತು ಹಲವು ಸಮಸ್ಯೆಗಳು ಇಂದಿಗೂ ಇಲ್ಲಿನ ಜನರನ್ನು ಕಾಡುತ್ತಿವೆ. ಕೈಗಾರಿಕಾ ಕ್ಷೇತ್ರದಲ್ಲಿ ವಿಶ್ವ ಮಟ್ಟದಲ್ಲಿ ಹೆಸರು ಮಾಡಿರುವ ಬಿಡದಿ ಅಭಿವೃದ್ಧಿಯಲ್ಲಿ ಮಾತ್ರ ಬಹಳ ಹಿಂದೆ ಇದೆ.

ಬಿಡದಿ ಬೃಹತ್ ಕೈಗಾರಿಕಾ ಪ್ರದೇಶ. ಇಂತಹ ಪಟ್ಟಣದಲ್ಲಿ ದಿನನಿತ್ಯ ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಹಾಗೂ ಸಾಮಾನ್ಯ ಜನರು ದಿನನಿತ್ಯ ಬಸ್ಗಳನ್ನು ಅವಲಂಬಿಸಿದ್ದಾರೆ. ಬಸ್ ನಿಲ್ದಾಣ, ಸಂಚಾರ ದೀಪ ಅಳವಡಿಕೆ, ಆಟೊ ನಿಲ್ದಾಣಗಳಂತಹ ಹಲವು ಸಮಸ್ಯೆ ಕಂಡು ಬರುತ್ತವೆ.

ಬಸ್ ನಿಲ್ದಾಣ ಇಲ್ಲ: ಬಿಡದಿ ಪಟ್ಟಣ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದೆ. ಆದರೆ, ಅಷ್ಟೇ ವೇಗವಾಗಿ ಮೂಲ ಸೌಕರ್ಯ ಜನರಿಗೆ ಸಿಗುತ್ತಿಲ್ಲ. ಬೆಂಗಳೂರು ಕಡೆಗೆ ಹೋಗುವ ಪ್ರಯಾಣಿಕರಿಗೆ ಸೂಕ್ತ ಬಸ್ ನಿಲ್ದಾಣ ಇಲ್ಲ. ಸದ್ಯ ಇರುವ ಬಸ್ ತಂಗುದಾಣ ಇದ್ದು ಪ್ರಯೋಜನ ಇಲ್ಲದಂತಾಗಿದೆ. ಬಸ್ ತಂಗುದಾಣ ಬೈಕ್ ಹಾಗೂ ಕಾರುಗಳ ನಿಲ್ದಾಣ ಸ್ಥಳವಾಗಿ ಬದಲಾಗಿದೆ. ಬಸ್ ತಂಗುದಾಣದ ಒಳಗೆ ಬೈಕ್ ನಿಲ್ಲಿಸಲಾಗುತ್ತದೆ. ಭಿಕ್ಷುಕರು ಹಾಗೂ ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದೆ.

ಆಟೊ ನಿಲ್ದಾಣ ಇಲ್ಲ: ಬೆಂಗಳೂರಿನಿಂದ ಬರುವ ಬಸ್ ನಿಲುಗಡೆ ಮಾಡುವ ಸ್ಥಳದಲ್ಲಿ ಆಟೊ ನಿಲ್ದಾಣ ಇಲ್ಲ. ಮೈಸೂರಿನಿಂದ ಬರುವ ಬಸ್ ನಿಲುಗಡೆ ಮಾಡುವ ಸ್ಥಳದಲ್ಲಿ ಕೂಡ ಸೂಕ್ತ ಆಟೊ ನಿಲ್ದಾಣ ಇಲ್ಲ. ಹೆದ್ದಾರಿಯ ಪಕ್ಕದಲ್ಲೇ ಅಡ್ಡಾದಿಡ್ಡಿಯಾಗಿ ಆಟೊ ನಿಲ್ಲಿಸುವುದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತದೆ.

ದಿನನಿತ್ಯ ಒಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ದಿನನಿತ್ಯ ಬೆಂಗಳೂರು ಕಡೆಗೆ ವಿದ್ಯಾಭ್ಯಾಸಕ್ಕಾಗಿ ಹೊರಡುತ್ತಾರೆ. ಆದರೆ ರಸ್ತೆಯಿಂದ ರಸ್ತೆಗೆ ದಾಟಬೇಕಾದರೆ ಸಂಕಷ್ಟ ಎದುರಾಗುತ್ತದೆ. ಬಿಡದಿ ಪೊಲೀಸ್ ಠಾಣೆ ಮುಂಭಾಗ ಆಟೊ ನಿಲುಗಡೆ ಮಾಡುತ್ತಿದ್ದು, ಸೂಕ್ತ ಆಟೊ ನಿಲ್ದಾಣ ಇಲ್ಲ. ಮಳೆ ಹಾಗೂ ಬಿಸಿಲಿನಲ್ಲೆ ಆಟೊ ನಿಲ್ಲಿಸಿಕೊಳ್ಳುವ ಸ್ಥಿತಿ ಇದೆ.

ಪಟ್ಟಣ ವ್ಯಾಪ್ತಿಯಲ್ಲಿ ಸೂಕ್ತ ಮಾರುಕಟ್ಟೆ ಇಲ್ಲದೆ ಪಾದಚಾರಿ ರಸ್ತೆ ಮೇಲೆಯೇ ವ್ಯಾಪಾರ ನಡೆಯುತ್ತಿದೆ. ಬೆಂಗಳೂರು- ಮೈಸೂರು ಹೆದ್ದಾರಿಯ ಇಕ್ಕೆಲಗಳಲ್ಲಿ ತರಕಾರಿ, ತಳ್ಳುಗಾಡಿ, ಹೂ ಮಾರಾಟ ಮಾಡುವವರು ಪಾದಚಾರಿ ರಸ್ತೆ ಅತಿಕ್ರಮಣ ಮಾಡಿಕೊಂಡಿದ್ದಾರೆ. ಇದರಿಂದ ಕೂಡ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಪಟ್ಟಣದಲ್ಲಿ ಸಂಚಾರ ಸಮಸ್ಯೆ ಹೆಚ್ಚಾಗಿದೆ. ಬಿಜಿಎಸ್ ವೃತ್ತದಲ್ಲಿ ಅವಶ್ಯಕವಾಗಿ ಸಂಚಾರ ದೀಪ ಅಳವಡಿಕೆ ಮಾಡಬೇಕಿದೆ. ಬೆಂಗಳೂರು ಕಡೆಯಿಂದ ಬರುವ ವಾಹನಗಳು ಇದೇ ವೃತ್ತದಲ್ಲಿ ತಿರುವು ಪಡೆದುಕೊಳ್ಳುತ್ತವೆ. ಪಟ್ಟಣದಿಂದ ಬರುವ ವಾಹನಗಳು ರಾಮನಗರ, ಚನ್ನಪಟ್ಟಣ, ಮೈಸೂರು ಕಡೆಗೆ ಇದೇ ವೃತ್ತದಲ್ಲಿ ತಿರುವು ಪಡೆದುಕೊಳ್ಳುವ ಕಾರಣ ಸಾಕಷ್ಟು ಸಂಚಾರ ದಟ್ಟಣೆ ಸಮಸ್ಯೆ ಉಂಟಾಗುತ್ತಿದೆ.

ದಿನನಿತ್ಯ ಲಘು ಉಪಹಾರ ತಯಾರಿಸುವ ಪೆಟ್ಟಿಗೆ ಅಂಗಡಿಗಳು ಹೆದ್ದಾರಿಯನ್ನೇ ಆಕ್ರಮಿಸಿಕೊಂಡಿವೆ. ದಿನನಿತ್ಯ ಅಪಘಾತಗಳ ಜೊತೆಗೆ ನಾಯಿಗಳ ಹಾವಳಿಯಂತೂ ಹೇಳತೀರದಂತಾಗಿದೆ.

ಬಿಡದಿ ಪಟ್ಟಣದಲ್ಲಿ ಇರುವ ಪಶು ಆಸ್ಪತ್ರೆ ಸುತ್ತಲೂ ತರಕಾರಿ ಅಂಗಡಿ ಹಾಗೂ ಮೀನಿನ ವ್ಯಾಪಾರಿಗಳು, ಹೋಟೆಲ್ ಸುತ್ತುವರೆದಿದೆ. ಆಸ್ಪತ್ರೆ ಒಳಗಡೆ ಹೋಗಲು ಸಂಕಷ್ಟಪಡುವಂತಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-14-206267546

ರಾಷ್ಟ್ರೀಯ ಹೆದ್ದಾರಿಯಲ್ಲಿ ವಿದ್ಯಾರ್ಥಿಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಾಡಲು ಕಷ್ಟವಾಗುತ್ತದೆ. ಕೂಡಲೇ ಸಂಚಾರ ದೀಪ ಅಳವಡಿಸಬೇಕು.

-ಕೆ.ಶ್ರೀನಿವಾಸ್, ಪುರಸಭೆ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.