ಕನಕಪುರ: ಕೆಲಸಕ್ಕೆ ಹೋಗುತ್ತಿದ್ದ ಪಿಡಿಒ ಬೈಕ್ಗೆ ಕಾಡಂದಿಗಳ ಗುಂಪು ಅಡ್ಡಲಾಗಿ ಬಂದ ಪರಿಣಾಮ ಆಯತಪ್ಪಿ ಬೈಕ್ನಿಂದ ಪಿಡಿಒ ಬಿದ್ದು ತೀವ್ರ ಗಾಯಗೊಂಡು ಪ್ರಜ್ಞಾ ಹೀನನಾಗಿರುವ ಘಟನೆ ಬುಧವಾರ ಶ್ರೀರಾಮ ಸಾಗರದ ಬಳಿ ನಡೆದಿದೆ.

ಗಾಯಗೊಂಡವರು ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ಹೇರಿಂದ್ಯಾಪನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಬಸವರಾಜು.ಎಚ್ (60). ಇವರು ಮೂಲತಃ ನಲ್ಲಹಳ್ಳಿ ಗ್ರಾಮದವರಾಗಿದ್ದರು. ಇನ್ನೂ ಎರಡು ತಿಂಗಳಲ್ಲಿ ನಿವೃತ್ತಿಯಾಗುವವರು.

ಬುಧವಾರ ಬೆಳಿಗ್ಗೆ ಸುಮಾರು 9 ಗಂಟೆಗೆ ನಲ್ಲಹಳ್ಳಿ ಗ್ರಾಮದಿಂದ ಬೈಕ್ನಲ್ಲಿ ಹೂಕುಂದ ಮಾರ್ಗವಾಗಿ ಹೋಗುತ್ತಿದ್ದಾಗ ಶ್ರೀರಾಮ ಸಾಗರದ ಬಳಿ ಕಾಡಂದಿಗಳ ಹಿಂಡು ಅಡ್ಡಲಾಗಿ ಬಂದಿವೆ. ಆಗ ಬೈಕ್ನಿಂದ ಆಯತಪ್ಪಿ ರಸ್ತೆ ಬದಿಗೆ ಬಿದ್ದಿದ್ದಾರೆ. ಇದರಿಂದ ಅವರ ತಲೆಗೆ ತೀವ್ರ ಪೆಟ್ಟಾಗಿ ರಕ್ತ ಸೋರಿಕೆಯಾಗಿ ಪ್ರಜ್ಞೆ ಕಳೆದುಕೊಂಡಿದ್ದಾರೆ.

ರಸ್ತೆಯಲ್ಲಿ ಹೋಗುತ್ತಿದ್ದವರು ತಕ್ಷಣವೇ ತಾಲ್ಲೂಕು ಪಂಚಾಯಿತಿ ಇಒ, ಎಡಿ ಹಾಗೂ ಗ್ರಾಮ ಪಂಚಾಯಿತಿಯವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಘಟನಾ ಸ್ಥಳಕ್ಕೆ ಇಒ ಅವಿನಾಶ್, ಎಡಿ ಮೋಹನ್ ಬಾಬು ಹಾಗೂ ಹೇರಿಂದ್ಯಾಪನಹಳ್ಳಿ ಗ್ರಾಮ ಪಂಚಾಯಿತಿ ನೌಕರರು ಮತ್ತು ಸಿಬ್ಬಂದಿಗಳು ಬಂದು ಬಸವರಾಜ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಮುಂದುವರೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.