ಮತದಾರ ಜಾಗೃತಿಗೆ ಬೈಕ್‌ ಪ್ರವಾಸ

ಶುಕ್ರವಾರ, ಏಪ್ರಿಲ್ 19, 2019
22 °C
ಬೆಂಗಳೂರಿನ ಯುವಕ ಬಸವರಾಜು ಕಾಳಜಿ

ಮತದಾರ ಜಾಗೃತಿಗೆ ಬೈಕ್‌ ಪ್ರವಾಸ

Published:
Updated:
Prajavani

ರಾಮನಗರ: ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಬೆಂಗಳೂರಿನ ಯುವಕ ಬಸವರಾಜು ಕಲ್ಲುಸಕ್ಕರೆ ರಾಜ್ಯದಾದ್ಯಂತ ಬೈಕ್‌ ಮೂಲಕ ಪ್ರವಾಸ ಹಮ್ಮಿಕೊಂಡಿದ್ದು, ಸೋಮವಾರ ಜಿಲ್ಲೆಯಲ್ಲಿ ಸಂಚರಿಸಿದರು.

ನಗರದ ಜನಸಂದಣಿ ಪ್ರದೇಶಗಳಿಗೆ ಭೇಟಿ ನೀಡಿದ ಅವರು ಮತದಾನದ ಮಹತ್ವದ ಕುರಿತು ಜನರಿಗೆ ತಿಳಿಹೇಳುವ ಪ್ರಯತ್ನ ಮಾಡಿದರು. ಐಜೂರು ವೃತ್ತ, ಎಂಎಚ್ ವೃತ್ತಘಿ, ಎಸ್ಪಿ ಕಚೇರಿ, ಜಿಪಂ ಕಚೇರಿ, ಜಿಲ್ಲಾಕಾರಿ ಕಚೇರಿ, ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಿಗೆ ಅವರು ಭೇಟಿ ನೀಡಿದ್ದರು.

‘ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಮತದಾನದಲ್ಲಿ ಎಲ್ಲರೂ ಪಾಲ್ಗೊಳ್ಳೋಣ, ಮತ ಚಲಾಯಿಸಿ ಪ್ರಜಾಪ್ರಭುತ್ವ ಗೆಲ್ಲಿಸೋಣ, ಸ್ಥಿರ ಸರ್ಕಾರಕ್ಕಾಗಿ ತಪ್ಪದೇ ಮತದಾನ ಮಾಡೋಣ, ಮತದಾನ ಜನ್ಮಸಿದ್ಧ ಹಕ್ಕು ಅದನ್ನು ಮಾರಿಕೊಳ್ಳುವುದು ಬೇಡ’ ಎಂಬ ಸಂದೇಶವುಳ್ಳ ಕರಪತ್ರಗಳನ್ನು ಜನರಿಗೆ ಹಂಚಿದರು. ‘ಹೋದ ಕಡೆಯಲ್ಲೆಲ್ಲ ಜನರು ಉತ್ತಮ ಸಹಕಾರ ನೀಡುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಯೋಗಾಲಯ ತಂತ್ರಜ್ಞನಾಗಿ ಕಾರ್ಯ ನಿರ್ವಹಿಸುತ್ತಿರುವ ಅವರು ಅದನ್ನು ಬಿಟ್ಟು ಬೈಕಿನಲ್ಲಿ ರಾಜ್ಯದಾದ್ಯಂತ ಪ್ರವಾಸ ಕೈಗೊಂಡಿದ್ದಾರೆ.

ಕಳೆದ ಫೆಬ್ರುವರಿ 24ರಂದು ಪ್ರವಾಸ ಹೊರಟ ಅವರು ಉತ್ತರದ ಗಡಿಯಾದ ಬೀದರ್‌ನಿಂದ ದಕ್ಷಿಣದ ಗಡಿಯಾದ ಚಾಮರಾಜನಗರದರೆಗೂ ಸಂಚರಿಸಿದ್ದಾರೆ. ‘ಈವರೆಗೆ5200 ಕಿ.ಮೀ. ಸಂಚರಿಸಿದ್ದು, ಇದು 30ನೇ ಜಿಲ್ಲಾ ಪ್ರವಾಸವಾಗಿದೆ. ಮಂಗಳವಾರ ಬೆಂಗಳೂರಿನಲ್ಲಿ ಪ್ರವಾಸ ಮುಕ್ತಾಯಗೊಳಿಸುತ್ತೇನೆ’ ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !