ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋನ್‌ ಕದ್ದಾಲಿಕೆ ಆರೋಪ ಸುಳ್ಳು: ಯೋಗೇಶ್ವರ್‌

Last Updated 24 ಆಗಸ್ಟ್ 2020, 13:39 IST
ಅಕ್ಷರ ಗಾತ್ರ

ರಾಮನಗರ:'ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‍ ಫೋ‌ನ್‌ ಕದ್ದಾಲಿಕೆ ಆರೋಪ ಶುದ್ಧ ಸುಳ್ಳು. ಅವರೇ ಕಳ್ಳ. ಹೀಗಿರುವಾಗ ಇನ್ನೊಬ್ಬರ ಮೇಲೆ ಆರೋಪ ಮಾಡುವುದು ಏನಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್‌ ಹೇಳಿದರು.

ಚನ್ನಪಟ್ಟಣದಲ್ಲಿ ಸೋಮವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು 'ಶಿವಕುಮಾರ್‍ ಈ ಹಿಂದೆ ತಾವೇ ಫೋನ್‌ ಟ್ಯಾಪಿಂಗ್‌ ಮಾಡಿಸಿ ನನ್ನ ಮೇಲೆ ಕದ್ದಾಲಿಕೆ ಆರೋಪ ಮಾಡಿದ್ದರು. ಈಗ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಸಲುವಾಗಿ ಸುಳ್ಳು ಆರೋಪ ಮಾಡಿದ್ದಾರೆ. ಅವರ ಫೋನ್‌ ಕದ್ದಾಲಿಕೆ ಮಾಡಿ ನಾವು ಯಾವ ರಾಜ್ಯ ಗೆಲ್ಲಬೇಕಿದೆ’ ಎಂದು ಪ್ರಶ್ನಿಸಿದರು.

'ಈ ಹಿಂದೆ ಜಿಲ್ಲೆಗೆ ನರೇಗಾ ಅನುದಾನ ಬಿಡುಗಡೆ ಆದ ಕೂಡಲೇ ಕನಕಪುರ ತಾಲ್ಲೂಕಿಗೆ ಮಾತ್ರ ಹೋಗುತಿತ್ತು. ಹೀಗಾಗಿ ಉಳಿದ ತಾಲ್ಲೂಕಿಗೆ ವ್ಯತ್ಯಾಸ ಆಗಿದೆ. ಸದ್ಯದಲ್ಲೇ ಅದನ್ನು ಸರಿಪಡಿಸಲಾಗುವುದು’ ಎಂದು ಪರೋಕ್ಷವಾಗಿ ಸಂಸದ ಡಿ.ಕೆ. ಸುರೇಶ್‌ ವಿರುದ್ಧ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT