ಭಾನುವಾರ, ಸೆಪ್ಟೆಂಬರ್ 22, 2019
25 °C

ಅರ್ಕಾವತಿ ನದಿಯಲ್ಲಿ ಮೃತದೇಹ ಪತ್ತೆ

Published:
Updated:
Prajavani

ಕನಕಪುರ: ತಾಲ್ಲೂಕಿನ ಕೋಡಿಹಳ್ಳಿ ರಸ್ತೆಯ ಟಿ.ಬೇಕುಪ್ಪೆ ಸರ್ಕಲ್‌ ಬಳಿ ಅರ್ಕಾವತಿ ನದಿಯಲ್ಲಿ ಮಡಿಕೇರಿ ವ್ಯಕ್ತಿಯೊಬ್ಬರ ಮೃತದೇಹವು ಗುರುವಾರ ಬೆಳಿಗ್ಗೆ ಪತ್ತೆಯಾಗಿದೆ.

ಮಡಿಕೇರಿ ಜಿಲ್ಲೆ ಸಿದ್ದಾಪುರದ ಅಶೋಪುರ ಬಡಾವಣೆಯ ಕನಕರಾಜು (40) ಮೃತಪಟ್ಟವರು. ಮೃತದೇಹದ ಪ್ಯಾಂಟ್‌ನಲ್ಲಿ ವಿಳಾಸದ ದಾಖಲಾತಿ ಮತ್ತು ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ ದೊರೆತಿದೆ.

ಅದರ ಆಧಾರದ ಮೇಲೆ ಮೃತರ ಕುಟುಂಬದವರನ್ನು ಪತ್ತೆಹಚ್ಚುವ ಪ್ರಯತ್ನ ನಡೆಸಲಾಗುತ್ತಿದೆ. ಕನಕಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತದೇಹವನ್ನು ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Post Comments (+)