ಭಾನುವಾರ, ನವೆಂಬರ್ 17, 2019
28 °C

ಬ್ರಹ್ಮಣೀಪುರ: ರಕ್ತ ಬಣ್ಣದ ಹುಣಸೆ ಕಾಯಿ!

Published:
Updated:
Prajavani

ಚನ್ನಪಟ್ಟಣ: ತಾಲ್ಲೂಕಿನ ಬ್ರಹ್ಮಣೀಪುರ ಗ್ರಾಮದ ಜಮೀನೊಂದರಲ್ಲಿ ಇರುವ ಹುಣಸೆ ಮರದ ಹಣ್ಣುಗಳಲ್ಲಿ ರಕ್ತದ ಮಾದರಿಯ ರಸ ಬರುತ್ತಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಎಲ್ಲ ಹುಣಸೆ ಹಣ್ಣಿನಲ್ಲಿ ಬಿಳಿ ಬಣ್ಣದ ರಸ ಬರೋದು ಸಾಮಾನ್ಯ. ಆದರೆ ಈ ಮರದ ಕಾಯಲ್ಲಿ ರಕ್ತದ ಬಣ್ಣದ ರಸ ಬರುತ್ತಿರುವುದನ್ನು ನೋಡಿದ ಜನ ಗೊಂದಲಕ್ಕೆ ಒಳಗಾಗಿದ್ದಾರೆ. ಅಕ್ಕಪಕ್ಕದ ಗ್ರಾಮಸ್ಥರು ಸಹ ಸ್ಥಳಕ್ಕೆ ಭೇಟಿ ನೀಡಿ ಈ ಕುತೂಹಲವನ್ನು ವೀಕ್ಷಿಸುತ್ತಿದ್ದಾರೆ.

‘ಈ ಮರದ ಇರುವ ಕಾಯಿಗಳಲ್ಲಿ ಮಾತ್ರ ರಕ್ತದ ರೀತಿ ರಸ ಬರುತ್ತಿದೆ. ಇದೊಂದು ಆಶ್ಚರ್ಯಕರ ವಿಚಾರ. ಆದರೆ ಇದರಿಂದಾಗಿ ನಮಗೆ ಈವರೆಗೂ ಯಾವುದೇ ತೊಂದರೆಯಾಗಿಲ್ಲ’ ಎನ್ನುತ್ತಾರೆ ಗ್ರಾಮದ ಹಿರಿಯರಾದ ಬಿಳೀಗೌಡ ಅವರು.

‘ಹುಣಸೆ ಕಾಯಿಗಳನ್ನು ಕೈಯಲ್ಲಿ ತೆಗೆದುಕೊಂಡು ಹಿಚುಕಿದರೆ ರಕ್ತದ ಬಣ್ಣದಂತೆ ಕೈಯಲ್ಲಾ ಕೆಂಪು ಕೆಂಪಾಗುತ್ತದೆ. ಮರದ ಬಳಿ ಬಂದವರೆಲ್ಲರೂ ಅವುಗಳನ್ನು ಪರೀಕ್ಷೆ ಮಾಡುತ್ತಿದ್ದಾರೆ. ಇದರ ರಸ ಕೆಂಪಾಗಿಯೇ ಬರುತ್ತದೆ. ಇದನ್ನು ಅಡುಗೆಗೆ ಬಳಸಿದರೆ ಸಾಂಬಾರು ಸಹ ರಕ್ತದ ರೀತಿ ಕೆಂಪಾಗುತ್ತದೆ’ ಎಂದು ಗ್ರಾಮಸ್ಥರು ತಿಳಿಸುತ್ತಾರೆ.

‘ಈ ರೀತಿಯ ಹುಣಸೆ ಮರಗಳು ಕಾಡಿನಲ್ಲಿ ವಿರಳವಾಗಿ ಸಿಗುತ್ತವೆ. ಅದರ ಕಾಯಿಗಳ ರಸ ಕೆಂಪಾಗಿ ರಕ್ತದ ರೀತಿ ಇರುತ್ತದೆ. ಇದು ಅಚ್ಚರಿ ಏನಲ್ಲ’ ಎಂದು ಅರಣ್ಯ ಇಲಾಖೆ ಅಧಿಕಾರಿ ಮಧು ಮಾಹಿತಿ ನೀಡುತ್ತಾರೆ.

ಪ್ರತಿಕ್ರಿಯಿಸಿ (+)