ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಕೆ. ಶಿವಕುಮಾರ್ ಕೃಷಿ ಆದಾಯದ ಮೇಲೆ ಸಿಬಿಐ ನಿಗಾ!

Last Updated 30 ಸೆಪ್ಟೆಂಬರ್ 2022, 4:05 IST
ಅಕ್ಷರ ಗಾತ್ರ

ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಕೃಷಿ ಆದಾಯವನ್ನು ಕೇಂದ್ರೀಕರಿಸಿ ಸಿಬಿಐ ಅಧಿಕಾರಿಗಳು ಶೋಧ ಕೈಗೊಂಡಿದ್ದಾರೆ.

ಬುಧವಾರ ಎಂಟು ಅಧಿಕಾರಿಗಳ ತಂಡವು ಕನಕಪುರ ತಾಲ್ಲೂಕಿನ ವಿವಿಧೆಡೆ ಇರುವ ಡಿಕೆಶಿ ನಿವಾಸ, ಕಚೇರಿಗಳಲ್ಲಿ ಪರಿಶೀಲನೆ ನಡೆಸಿದೆ. ಮುಖ್ಯವಾಗಿ ಅವರು ಹಾಗೂ ಅವರ ಕುಟುಂಬಸ್ಥರು, ಸಂಬಂಧಿಕರ ಹೆಸರಿನಲ್ಲಿ ಇರುವ ಜಮೀನುಗಳ ದಾಖಲೆಗಳು, ಅದರಿಂದ ಬರುವ ಆದಾಯದ ಕುರಿತು ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ.

ಕನಕಪುರ ತಹಶೀಲ್ದಾರ್ ಹಾಗೂ ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳನ್ನು ಜಮೀನುಗಳಿಗೆ ಕರೆದೊಯ್ದಿರುವ ತಂಡವು ಯಾವ ಜಮೀನು ಯಾರ ಹೆಸರಿನಲ್ಲಿ ಇದೆ. ಸದ್ಯ ಯಾರು ಅದರ ಅನುಭೋಗದಲ್ಲಿ ಇದ್ದಾರೆ ಎಂಬೆಲ್ಲ ಮಾಹಿತಿ ಕಲೆಹಾಕಿದೆ.

ಕಳೆದ ಬಾರಿಯ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್ ಕುಟುಂಬವು ₹840 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಘೋಷಣೆ ಮಾಡಿಕೊಂಡಿತ್ತು. ಅದರಲ್ಲೂ ಕೃಷಿ ಆದಾಯದ ಹೆಚ್ಚಳ ತೋರಿಸಿತ್ತು. ಸದ್ಯ ಅದರ ಪರಿಶೀಲನೆ ಆರಂಭ ಆಗಿರುವುದು ಕುತುಹೂಲ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT