ಮಂಗಳವಾರ, ಏಪ್ರಿಲ್ 20, 2021
32 °C

ಕೋಟೆ ಮಾರಮ್ಮ ದೇವಿಗೆ ಮೊರಗಳಿಂದ ಅಲಂಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ಎಳ್ಳಾಮವಾಸ್ಯೆ ಹಾಗೂ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪಟ್ಟಣದ ಕೋಟೆ ಮಾರಮ್ಮ ದೇವಿಗೆ ಗುರುವಾರ ಮೊರ ಮತ್ತು ಬಳೆಗಳಿಂದ ವಿಶೇಷವಾಗಿ ಅಲಂಕಾರ ಮಾಡಿ ಪೂಜಿಸಲಾಯಿತು.

ಬೆಳಿಗ್ಗೆಯಿಂದಲೇ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದರು. ಪ್ರತಿವರ್ಷ ಸಂಕ್ರಾಂತಿಯ ಹಿಂದಿನ ದಿನ ಹಾಗೂ ಸಂಕ್ರಾಂತಿ ದಿನ ಇಂತಹ ವಿಶೇಷ ಪೂಜೆ ನಡೆಸುವುದು ಇಲ್ಲಿನ
ವಾಡಿಕೆ.

ಹಿಂದೆ ತರಕಾರಿಗಳಿಂದ, ಹಣ್ಣುಗಳಿಂದ, ಬಾಳೆ ಎಲೆಗಳಿಂದ, ಬಳೆಗಳಿಂದ, ವೀಳ್ಯದೆಲೆ, ಅರಿಸಿನ ಕುಂಕುಮ, ಬೆಣ್ಣೆ, ನಿಂಬೆಹಣ್ಣು, ನವಧಾನ್ಯದಿಂದ ವಿಶೇಷವಾಗಿ ಅಲಂಕಾರ ಮಾಡಲಾಗುತ್ತಿತ್ತು. ಈ ವರ್ಷ ಮೊರ ಮತ್ತು ಬಳೆಗಳಿಂದ ಅಲಂಕಾರ ಮಾಡಲಾಗಿದೆ ಎಂದು ಅರ್ಚಕ ಆರ್.ಕೆ. ಮಲವೇಗೌಡ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.