ಕನಕಪುರ:‘2030 ವೇಳೆಗೆ ಕ್ಯಾನ್ಸರ್ ವಿಶ್ವದ ದೊಡ್ಡ ಪಿಡುಗಾಗಲಿದೆ. ಇದಕ್ಕಾಗಿ ಈಗಿನಿಂದಲೇ ಹೆಣ್ಣು ಮಕ್ಕಳು ಜಾಗೃತಿ ಹೊಂದಿ ವ್ಯಾಕ್ಸಿನ್ ಪಡೆದುಕೊಳ್ಳಬೇಕು’ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಅವರ ಪತ್ನಿ ಅನುಸೂಯ ತಿಳಿಸಿದರು.

ತಾಲ್ಲೂಕಿನ ಹಲವು ಸರ್ಕಾರಿ ಶಾಲೆಗಳಿಗೆ ಸಂಸದರ ಅನುದಾನದಲ್ಲಿ ನೀಡಿದ ಉಚಿತ ಕಂಪ್ಯೂಟರ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ವಿಕಲ್ ಕ್ಯಾನ್ಸರ್ ಜಾಗೃತಿ: ಸರ್ವಿಕಲ್ ಕ್ಯಾನ್ಸರ್ ಮತ್ತು ಸ್ಯಾನಿಟರಿ ಪ್ಯಾಡ್ ಬಳಕೆ ಸಮಸ್ಯೆ ಬೆಳೆಯುತ್ತಿದೆ. 17-18 ವರ್ಷದ ಹೆಣ್ಣು ಮಕ್ಕಳು ಸರ್ವಿಕಲ್ ಕ್ಯಾನ್ಸರ್ಗೆ ತುತ್ತಾಗಬಹುದು. ಇದರ ನಿವಾರಣೆಗೆ ಜಾಗೃತಿ ಮೂಡಿಸಿ ವ್ಯಾಕ್ಸಿನೇಷನ್ ಮಾಡಿಸಲು ತೀರ್ಮಾನಿಸಲಾಗಿದೆ ಎಂದರು.

ಪರಿಸರ ಸ್ನೇಹಿ ಪರ್ಯಾಯ: ಸ್ಯಾನಿಟರಿ ಪ್ಯಾಡ್ಗಳು ಮಣ್ಣಿನಲ್ಲಿ ಕರಗುವುದಿಲ್ಲ ಮತ್ತು ಪರಿಸರ ಹಾನಿ ಮಾಡುತ್ತವೆ. ಬದಲಿಗೆ ಮೆನ್ಸ್ಟ್ರುಯಲ್ ಕಪ್ ಬಳಸಬಹುದು. ಒಂದು ಕಪ್ 5 ವರ್ಷದವರೆಗೆ ಉಪಯೋಗಿಸಬಹುದು ಮತ್ತು ಪರಿಸರ ಸ್ನೇಹಿ ಎಂದರು.

ದಿಶಾ ಕಮಿಟಿ ಸದಸ್ಯೆ ಶೋಭಾ, ಶಾಲೆಗೆ 13 ಕಂಪ್ಯೂಟರ್ ಸಿಕ್ಕಿದೆ. ಅನುಸೂಯ ಅವರು ಶಾಲೆಗಳಿಗೆ ಭೇಟಿ ನೀಡಲು ಬಯಸಿದ್ದರಿಂದ ಕಂಪ್ಯೂಟರ್ ವಿತರಣೆ ಮತ್ತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು ಎಂದರು.

ರಾಂಪುರ, ಬಂಡಿಗನಹಳ್ಳಿ, ಚಿಕ್ಕಮುದುವಾಡಿ, ಗಾಣಾಳು, ದೊಡ್ಡಾಲಹಳ್ಳಿ, ನಲ್ಲಹಳ್ಳಿ, ನಾಯ್ಕನಹಳ್ಳಿ ಮತ್ತು ಬನ್ನಿಮುಕ್ಕೋಡ್ಲು ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್ ನೀಡಲಾಯಿತು.

ಕನಕಪುರ: ವಿಶ್ವದಲ್ಲಿ 2030 ವೇಳೆಗೆ ಕ್ಯಾನ್ಸರ್ ಒಂದು ದೊಡ್ಡ ಪಿಡುಗಾಗಲಿದೆ, ಅದಕ್ಕಾಗಿ ಈಗಿನಿಂದಲೇ ಹೆಣ್ಣುಮಕ್ಕಳು ಅದರ ಜಾಗೃತಿ ಪಡೆದು ವ್ಯಾಕ್ಸಿನ್ ಪಡೆದುಕೊಳ್ಳಬೇಕೆಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಅವರ ಪತ್ನಿ ಅನುಸೂಯ ತಿಳಿಸಿದರು.

ತಾಲ್ಲೂಕಿನ ಸರ್ಕಾರಿ ಶಾಲೆಗಳಿಗೆ ಸಂಸದ ಡಾ.ಸಿ.ಎನ್. ಮಂಜುನಾಥ್ ಅವರಿಂದ ಕೊಡುತ್ತಿರುವ ಉಚಿತ ಕಂಪ್ಯೂಟರ್ ಗಳನ್ನು ಸರ್ಕಾರಿ ಶಾಲೆಗಳಿಗೆ ವಿತರಿಸಿ ಮಾತನಾಡಿದರು.

ಸಮಾಜದಲ್ಲಿ ಸರ್ವಿಕಲ್ ಕ್ಯಾನ್ಸರ್ ಮತ್ತು ಹೆಣ್ಣು ಮಕ್ಕಳು ಬಳಸುವ ಸ್ಯಾನಿಟರಿ ಪ್ಯಾಡ್ ದೊಡ್ಡ ಸಮಸ್ಯೆ ಆಗಲಿದೆ, 17 ರಿಂದ18ನೇ ವಯಸ್ಸಿನ ಹೆಣ್ಣು ಮಕ್ಕಳು ಸರ್ವಿಕಲ್ ಕ್ಯಾನ್ಸರ್ ಗೆ ತುತ್ತಾಗುವ ಸಾಧ್ಯತೆ ಇದೆ, ಅದರ ನಿವಾರಣೆಗಾಗಿ ಹೆಣ್ಣು ಮಕ್ಕಳಿಗೆ ಅದರ ಬಗ್ಗೆ ಜಾಗೃತಿ ಮೂಡಿಸಿ ವ್ಯಾಕ್ಸಿನ್ ಕೊಡುವ ಕೆಲಸ ಮಾಡಲು ತೀರ್ಮಾನಿಸಿರುವುದಾಗಿ ತಿಳಿಸಿದರು.

ಹೆಣ್ಣು ಮಕ್ಕಳು ಬಳಸುವ ಸ್ಯಾನಿಟರಿ ಪ್ಯಾಡ್ ಮಣ್ಣಿನಲ್ಲಿ ಕರಗುವುದಿಲ್ಲ, ಒಂದು ತಿಂಗಳಲ್ಲಿ ಒಬ್ಬರು 8 ರಿಂದ 10 ಬಳಸುತ್ತಾರೆ, ಪ್ರತಿಯೊಬ್ಬರು ಈ ರೀತಿಯಾಗಿ ಬಳಕೆ ಮಾಡಿ ಭೂಮಿಯ ಮೇಲೆ ಬಿಸಾಡಿದರೆ ಅದರಿಂದ ಮುಂದೆ ದೊಡ್ಡ ಸಂಕಷ್ಟ ಎದುರಾಗಲಿದೆ.

ಅದರ ಬದಲಾಗಿ ಮೆನ್ಸರ್ ಕಪ್ ಬಳಸಿದರೆ ಒಂದು ಕಪ್ ಐದು ವರ್ಷ ಬರಲಿದೆ, ಇದರಿಂದ ಪರಿಸರಕ್ಕೂ ಯಾವುದೇ ಹಾನಿ ಇರುವುದಿಲ್ಲ ಅದಕ್ಕಾಗಿ ಶಾಲಾ ಮಕ್ಕಳಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ತಾವು ಹಮ್ಮಿಕೊಂಡಿರುವುದಾಗಿ ಹೇಳಿದರು.

ಸರ್ಕಾರಿ ಶಾಲಾ ಹೆಣ್ಣು ಮಕ್ಕಳಲ್ಲಿ ಸ್ಯಾನಿಟರಿ ಪ್ಯಾಡ್ ಮತ್ತು ಸರ್ವಿಕಲ್ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಶಾಲೆಗೆ ಹೋಗಬೇಕೆಂದು ತೀರ್ಮಾನಿಸಿದ್ದೆ, ದಿಶಾ ಕಮಿಟಿ ಸದಸ್ಯರು ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್ ವಿತರಿಸಲು ನಿರ್ಧರಿಸಿದ್ದರು ಹಾಗಾಗಿ ಇಂದು ಶಾಲೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು.

ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಹಲವು ಸಮಸ್ಯೆಗಳನ್ನು ಹಾಗೂ ಶಾಲೆಯ ಸ್ಥಿತಿಗತಿಗಳ ಬಗ್ಗೆ ನಮಗೆ ತಿಳಿಸಿದ್ದಾರೆ, ಸಂಸದರ ಜೊತೆ ಮಾತನಾಡಿ ಅವುಗಳನ್ನು ಪರಿಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ದಿಶಾ ಕಮಿಟಿ ಸದಸ್ಯೆ ಶೋಭಾ ಮಾತನಾಡಿ ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಅವಶ್ಯಕತೆಯ ಬಗ್ಗೆ ಶಿಕ್ಷಕರು ತಿಳಿಸಿದ್ದರು, ಕಂಪ್ಯೂಟರ್ ಬೇಡಿಕೆಯ ವಿಚಾರವನ್ನು ಸಂಸದ ಡಾ.ಸಿ.ಎನ್. ಮಂಜುನಾಥ್ ಗಮನಕ್ಕೆ ತಂದಾಗ ಅವರು 13 ಕಂಪ್ಯೂಟರ್ ಗಳನ್ನು ನೀಡಿದ್ದರು ಎಂದರು.

ಅವುಗಳ ವಿತರಣೆ ಕಾರ್ಯವನ್ನು ಒಂದೇ ದಿನ ಮಾಡಬೇಕೆಂದು ಇದ್ದೆವು, ಅನಸೂಯಮ್ಮ ಅವರು ಶಾಲಾ ಮಕ್ಕಳ ಭೇಟಿ ಮಾಡಬೇಕೆಂದು ಬಯಸಿದ್ದರು, ಇಂದು ಶಿವನಹಳ್ಳಿ ಜಾತ್ರೆ ಮತ್ತು ಕಬ್ಬಾಳು ದೇವಸ್ಥಾನಕ್ಕೆ ಬರುವುದಾಗಿ ತಿಳಿಸಿದ್ದರು.

ಆಗಾಗಿ ಇಂದು ಅವರೊಟ್ಟಿಗೆ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಕಂಪ್ಯೂಟರ್ ವಿತರಣೆ ಮಾಡಿರುವುದಾಗಿ ತಿಳಿಸಿದರು.

ತಾಲ್ಲೂಕಿನ ರಾಂಪುರ, ಬಂಡಿಗನಹಳ್ಳಿ, ಚಿಕ್ಕಮುದುವಾಡಿ, ಗಾಣಾಳು, ದೊಡ್ಡಾಲಹಳ್ಳಿ, ನಲ್ಲಹಳ್ಳಿ, ನಾಯ್ಕನಹಳ್ಳಿ, ಬನ್ನಿಮುಕ್ಕೋಡ್ಲು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಕಂಪ್ಯೂಟರ್ ವಿತರಣೆ ಮಾಡಿದರು.

ಶಿವನಹಳ್ಳಿಯಲ್ಲಿ ನಡೆಯುತ್ತಿರುವ ವೀರಭದ್ರ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ನಂತರ ಕಬ್ಬಾಳಮ್ಮ ದೇವಸ್ಥಾನಕ್ಕೆ ತೆರಳಿ ಅಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಜೆಡಿಎಸ್ ಮತ್ತು ಬಿಜೆಪಿ ಮುಖಂಡರಾದ ಚಿನ್ನಸ್ವಾಮಿ, ಕೆ.ಪಿ.ಕುಮಾರ್, ನಲ್ಲಹಳ್ಳಿ ಶಿವಕುಮಾರ್, ಹೆಗ್ಗನೂರು ಶಿವಕುಮಾರ್, ರಾಜೇಂದ್ರ, ತಿಮ್ಮೇಗೌಡ, ಕಬ್ಬಾಳೇಗೌಡ, ಮಮತ, ರಮೇಶ್, ಕಲ್ಲಿಗೌಡನದೊಡ್ಡಿ ಮಹದೇವ್, ಪಾಲಾಕ್ಷ, ಗಟ್ಟಿ ಗೌಡ ಮೊದಲದವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.