ಚನ್ನಪಟ್ಟಣ: ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್ಗಳ ಸಂಚಾರ ಚನ್ನಪಟ್ಟಣಕ್ಕೂ ವಿಸ್ತರಣೆಯಾಗಿದ್ದು, ಚನ್ನಪಟ್ಟಣದಿಂದ ಬೆಂಗಳೂರಿಗೆ ಬಿಎಂಟಿಸಿ ಬಸ್ ಸೇವೆ ಬೇಕು ಎನ್ನುವ ತಾಲ್ಲೂಕಿನ ಜನರ ಬಹುದಿನಗಳ ಕನಸು ನನಸಾದಂತಾಗಿದೆ.

ಚನ್ನಪಟ್ಟಣದ ಬಸ್ ನಿಲ್ದಾಣದಿಂದ ಶುಕ್ರವಾರ 8 ಹವಾನಿಯಂತ್ರಿತ ಬಿಎಂಟಿಸಿ ವಜ್ರ ಬಸ್ಗಳ ಸಂಚಾರಕ್ಕೆ ಚಾಲನೆ ನೀಡಲಾಗಿದೆ. ಇವು ಪ್ರತಿದಿನ ಅರ್ಧ ಗಂಟೆಗೊಮ್ಮೆ ಸಂಚರಿಸಲಿವೆ.

ಈ ಬಸ್ಗಳು ಪ್ರತಿದಿನ ಚನ್ನಪಟ್ಟಣದಿಂದ ಮುಂಜಾನೆ 5.15 ಗಂಟೆಯಿಂದ ಸಂಚಾರ ಆರಂಭಿಸಿ ರಾತ್ರಿ 7 ಗಂಟೆವರೆಗೆ ಓಡಾಡಲಿವೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಳಿಗ್ಗೆ 7.20 ಗಂಟೆಯಿಂದ ಸಂಚಾರ ಆರಂಭಿಸಿ ರಾತ್ರಿ 9.40 ಗಂಟೆಯವರೆಗೆ ಓಡಾಡಲಿವೆ. ಚನ್ನಪಟ್ಟಣದಿಂದ ಬೆಂಗಳೂರಿಗೆ ಪ್ರಯಾಣ ದರ ಒಬ್ಬರಿಗೆ ₹105. ಇದಲ್ಲದೆ ದೈನಿಕ ಪಾಸು, ಮಾಸಿಕ ಪಾಸು, ವಾರ್ಷಿಕ ಪಾಸು ವ್ಯವಸ್ಥೆ ಮಾಡಲಾಗಿದೆ. ಚನ್ನಪಟ್ಟಣದಿಂದ ರಾಮನಗರಕ್ಕೆ ಒಬ್ಬರಿಗೆ ₹25 ನಿಗದಿ ಮಾಡಲಾಗಿದೆ. ಚನ್ನಪಟ್ಟಣದಿಂದ ಹೊರಡುವ ಬಸ್ಗಳು ರಾಮನಗರ, ಬಿಡದಿ, ಕೆಂಗೇರಿ ಬಸ್ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಮಾಡಲಿವೆ. ಮಹಿಳೆಯರಿಗೆ ಉಚಿತ ಪ್ರಯಾಣ ಇರುವುದಿಲ್ಲ. ವಿದ್ಯಾರ್ಥಿಗಳ ಪಾಸ್ಗೆ ಅವಕಾಶ ಇಲ್ಲ.

ಬಿಬಿಎಂಪಿ ವ್ಯಾಪ್ತಿಯ 25 ಕಿ.ಮೀ. ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್ ಗಳು ಈಗ ರಾಮನಗರ ಚನ್ನಪಟ್ಟಣಕ್ಕೂ ಸಂಚರಿಸುವುದರಿಂದ ಈಗ ತನ್ನ ವ್ಯಾಪ್ತಿಯನ್ನು 60 ಕಿ.ಮೀ.ಗೆ ವಿಸ್ತರಿಸಿಕೊಂಡಂತಾಗಿದೆ. ಇದರಿಂದ ಪ್ರತಿನಿತ್ಯ ಚನ್ನಪಟ್ಟಣದಿಂದ ಬೆಂಗಳೂರಿಗೆ ತೆರಳುವ ಸಾವಿರಾರು ಮಂದಿ ಪ್ರಯಾಣಿಕರಿಗೆ ಅನುಕೂಲವಾದಂತಾಗಿದೆ.

ಶಾಸಕ ಸಿ.ಪಿ. ಯೋಗೇಶ್ವರ್ ಪ್ರತಿಕ್ರಿಯಿಸಿ, ‘ಇಲ್ಲಿನ ಪ್ರಯಾಣಿಕರ ಒತ್ತಡದ ಹಿನ್ನೆಲೆಯಲ್ಲಿ ಸಾರಿಗೆ ಸಚಿವರಲ್ಲಿ ಬಿಎಂಟಿಸಿ ಬಸ್ಗಳ ವ್ಯವಸ್ಥೆಗೆ ಮನವಿ ಮಾಡಲಾಗಿತ್ತು. ಅದರಂತೆ ಸಚಿವರು ಈಗ ಎಂಟು ಹವಾನಿಯಂತ್ರಿತ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಹೆಚ್ಚಿಸಲಾಗುವುದು’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-14-1517752852

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.